ಭಾಗಮಂಡಲ, ಏ. ೧೧: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿರುವ ಗೌಡ ಕುಟುಂಬಗಳ ನಡುವಿನ ಕುದುಕುಳಿ ಐನ್‌ಮನೆ ಕ್ರಿಕೆಟ್ ಕಪ್ ಪಂದ್ಯಾಟದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪರ್ಲಕೋಟಿ ಮತ್ತು ಕೆದಂಬಾಡಿ ತಂಡಗಳ ನಡುವೆ ಪಂದ್ಯ ನಡೆದು ಪರ್ಲಕೋಟಿ ಗೆಲುವು ಸಾಧಿಸುವುದರ ಮೂಲಕ ಮೊದಲ ಸೆಮಿಫೈನಲ್ ಪ್ರವೇಶಿಸಿತು.

ಪರ್ಲಕೋಟಿ ತಂಡವು ಎದುರಾಳಿ ಕೆದಂಬಾಡಿ ತಂಡಕ್ಕೆ ೮೨ ರನ್‌ಗಳ ಸವಾಲನ್ನು ಒಡ್ಡಿತ್ತು. ಕೆದಂಬಾಡಿ ತಂಡವು ಕೇವಲ ೨೭ ರನ್ ಗಳಿಸಿ ೫೭ ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.

ತೊತ್ತಿಯನ ಮತ್ತು ಕಟ್ಟೆಕೋಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಟ್ಟೆಕೋಡಿ ತಂಡ ೩೮ ರನ್ ಗಳಿಸಿದರೆ ತೊತ್ತಿಯನ ತಂಡ ೬ ವಿಕೆಟ್‌ಗಳ ಗೆಲುವು ಸಾಧಿಸಿತು.

ಮುಂದಿನ ಪಂದ್ಯದಲ್ಲಿ ಕೆದಂಬಾಡಿ ತಂಡವು ಪಡನೋಳನ ತಂಡದ ವಿರುದ್ಧ ಆಡಿತು. ಪಡನೋಳನ ತಂಡ ೫೨ ರನ್ ಗಳಿಸಿದರೆ ಕೆದಂಬಾಡಿ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು. ವಾಡಿಯಪ್ಪನ ಮತ್ತು ಪರ್ಲಕೊಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ಲಕೋಟಿ ೭೧ ರನ್ ಗಳಿಸಿತು. ವಾಡಿಯಪ್ಪನ ತಂಡ ೪೦ ರನ್ ಮಾಡಿ ೩೧ ರನ್‌ಗಳಿಂದ ಸೋಲನ್ನು ಅನುಭವಿಸಿತು. ಮುಂದಿನ ಪಂದ್ಯ ಕೆದಂಬಾಡಿ ಮತ್ತು ತೊತ್ತಿಯನ ತಂಡಗಳ ನಡುವೆ ನಡೆಯಿತು. ತೊತ್ತಿಯನ ತಂಡ ೭೧ ರನ್ ಗಳಿಸಿದರೆ ಕೆದಂಬಾಡಿ ಒಂಬತ್ತು ವಿಕೆಟ್‌ಗಳ ಗೆಲುವು ಸಾಧಿಸಿತು. ಪರ್ಲಕೋಟಿ ಮತ್ತು ಕುಲ್ಲಚೆಟ್ಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ೬೧ ರನ್ ಮಾಡಿ ಗೆಲುವು ಸಾಧಿಸಿತು. ಕುಲ್ಲಚೆಟ್ಟಿ ತಂಡ ಕೇವಲ ೨೧ ರನ್ ಗಳಿಸಿ ೪೦ ರನ್‌ಗಳ ಸೋಲನ್ನು ಅನುಭವಿಸಿತು. - ಸುನಿಲ್