ದ್ವಾಪರದೊಳು ಮಹಾಭಾರತದ ಸಮರಾಂಗಣದಲ್ಲಿ ಅಧರ್ಮದ ವಿರುದ್ಧ ಸಾರಿದ ಧರ್ಮಯುದ್ಧ ಕಾಲದಲ್ಲಿ ಕರ್ತವ್ಯ ವಿಮುಖನಾದ ಪಾಂಡವ ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಜಗದ್ಗುರು ಶ್ರೀ ಕೃಷ್ಣ ಭೋಧಿಸಿದ್ದು ಗೀತಾ ಉಪದೇಶ. ಇಲ್ಲಿ ಸಾಕ್ಷಾತ್ ಭಗವಂತ ಉಪದೇಶಿಸಿದ ಕಾರಣ ಅದು ಭಗವದ್ಗೀತೆ ಎಂದು ಪ್ರಖ್ಯಾತ ಆಯಿತು. ಮಾತ್ರವಲ್ಲದೆ ಎಲ್ಲ ಕಾಲಕ್ಕೂ ಮನುಕುಲದ ಏಳಿಗೆಗೆ ಅದೊಂದು ಅದ್ಭುತ ಅನುಭವ ನೀಡುವ ಗ್ರಂಥವಾಗಿ ಈ ಕಲಿಗಾಲದಲ್ಲೀ ಕೂಡ ಲೋಕ ವಿಖ್ಯಾತವಾಯಿತು. ಜಗತ್ತಿನ ಎಲ್ಲ ಭಾಷೆಗಳಲ್ಲಿ ಭಗವದ್ಗೀತೆಯೇ ಬೆಳಕು ಚೆಲ್ಲುವ ಮೂಲಕ ಸದ್ಗಕ್ತರಲ್ಲಿ ಏಕಾತ್ಮ ಭಾವ ಮೂಡಿಸುವಂತಾಯಿತು...
ಇAದು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಇಸ್ಕಾನ್ ಸಂಸ್ಥೆಯ ಸಹಯೋಗದಲ್ಲಿ ಭಗವಂತನ ವಿಶೇಷ ಪ್ರಾರ್ಥನೆ ಮೂಲಕ ಕೃಷ್ಣ ಪ್ರಜ್ಞೆಯ ಜಾಗೃತಿ ಮೂಡಿಸುವದರೊಂದಿಗೆ ಮಾನವ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾಯಕ ನಿರತ ಆಗಿರುವದು ಸರ್ವರಿಗೂ ತಿಳಿದಿರುವ ವಿಚಾರ. ಅಲ್ಲದೆ ಭಗವದ್ಗೀತೆಯ ಕುರಿತು ಅನೇಕ ದಾರ್ಶನಿಕರು ಸಂತ ಶ್ರೇಷ್ಠ ಜ್ಞಾನಿಗಳ ಸಹಿತ ಸಾಹಿತ್ಯ ಲೋಕದ ದಿಗ್ಗಜರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ದೊಂದಿಗೆ ಶ್ರೀ ಕೃಷ್ಣನ ಲೀಲಾಮೃತವನ್ನು ಕೊಂಡಾಡಿದ್ದಾರೆ. ಆ ಸಾಲಿನಲ್ಲಿ ಕೊಡಗಿನ "ಶಕ್ತಿ" ದೈನಿಕ ಸ್ಥಾಪಕ ಸಂಪಾದಕರಾದ ಸ್ವರ್ಗೀಯ ಶ್ರೀ ಬಿ. ಎಸ್. ಗೋಪಾಲಕೃಷ್ಣ ಅವರೂ ಕೂಡ ಒಬ್ಬರಾಗಿದ್ದಾರೆ ಎಂದು ನೆನಪಿಸಿಕೊಂಡರೆ ಇದೊಂದು ಅದ್ಭುತ ಭಕ್ತಿ ರಸದ ಉದ್ಘçಂಥವೇ ಸರಿ. ಈ ಭಗವದ್ಗೀತೆಯ ಕುರಿತು ಈಗ ಉಡುಪಿ ಶ್ರೀ ಕೃಷ್ಣ ಸನ್ನಿಧಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ದೂರ ದೃಷ್ಟಿಯ ಸಂಕಲ್ಪ ಮಾಡಿ ತಮ್ಮ ೨೦೨೪ನೇ ವರ್ಷದ ಪರ್ಯಾಯ ಚಾತುರ್ಮಾಸ್ಯ ಪರ್ವಕಾಲದಲ್ಲಿ ೨೦೨೬ರ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ ನೀಡಿ ಸಜ್ಜನ ಕೋಟಿಗೆ ಅಪೂರ್ವ ಅವಕಾಶ ಕಲ್ಪಿಸಿದ್ದಾರೆ.
ಈಗಾಗಲೇ ನಮ್ಮ ಕೊಡಗು ಜಿಲ್ಲೆಯಲ್ಲಿ ಹಾಗೂ ಇತರೆಡೆಗಳಿಂದ ಈ ಭಗವದ್ಗೀತೆಯ ಬರವಣಿಗೆ ಯಜ್ಞ ಆರಂಭಗೊAಡಿದೆ. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಸಹಿತ ಮನೆ ಮನೆಗೆ ಮತ್ತು ದೇವಾಲಯ ಸನ್ನಿಧಿಯಲ್ಲಿ ಕೂಡ ಭಗವದ್ಗೀತೆ ಅಭಿಯಾನ ಮುಂದುವರಿದಿದೆ. ಪುತ್ತಿಗೆ ಶ್ರೀಗಳು ಸಂಕಲ್ಪ ಮಾಡಿದಂತೆ ಮುಂದಿನ ೨ ವರ್ಷಗಳ ಕಾಲ ಮಿತಿಯಲ್ಲಿ ಗೀತೆಯನ್ನು ಸರ್ವ ಜನಾಂಗದ ಆಸಕ್ತರು ಯಾವುದೇ ರೀತಿಯ ಮುಜುಗರ ಪಡದೆ ಲಿಖಿತ ರೂಪದಲ್ಲಿ ೭೦೦ ಶ್ಲೋಕಗಳನ್ನು ಬರೆದು ಶ್ರೀ ಮಠಕ್ಕೆ ತಲುಪಿಸುವ ಯೋಜನೆ ರೂಪಿಸಲಾಗಿದೆ. ಆ ಸಲುವಾಗಿಯೇ ಸದ್ಗಕ್ತರಲ್ಲಿ ಹಾಗೂ ಆಸಕ್ತರುಗಳಿಗೆ ಭಗವದ್ಗೀತೆಯ ಮುದ್ರಿತ ಸಾಹಿತ್ಯ ಹಾಗೂ ಬರವಣಿಗೆಗೆ ಬೇಕಾದ ಪುಸ್ತಕವನ್ನು ಶ್ರೀ ಮಠವೇ ತಲುಪಿಸಿ ಕೊಡುತ್ತಿದೆ. ಶ್ರೀ ಮಠದಿಂದ ಈ ಯಜ್ಞದಲ್ಲಿ ಭಾಗವಹಿಸಲು ಮತ್ತು ಮಠದಿಂದ ಒದಗಿಸುವ ಸಾಹಿತ್ಯ ಪುಸ್ತಕ ಬಾಪ್ತು ರೂಪಾಯಿ ೨೫೮ ಮೊತ್ತವನ್ನು ನೀಡಿ ಗೀತಾ ಲೇಖನ ಆರಂಭಿಸಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀಗಳು ಕರೆ ನೀಡಿದ್ದಾರೆ. ಮಾತ್ರವಲ್ಲದೆ ಪ್ರತಿಯೊಬ್ಬರು ಬರೆದು ಪೂರ್ಣಗೊಳಿಸಿದ ಗೀತೆ ಪ್ರತಿಯನ್ನು ಉಡುಪಿ ಶ್ರೀ ಕೃಷ್ಣನಿಗೆ ಚಾತುರ್ಮಾಸ್ಯ ಪರ್ವಕಾಲದಲ್ಲಿ ಸಮರ್ಪಿಸಿ ಪ್ರಸಾದದೊಂದಿಗೆ ಆಯಾ ಕರ್ತೃಗಳಿಗೆ ಹಿಂತಿರುಗಿಸಲು ಯೋಜನೆ ಕೈಗೊಂಡಿರುವದಾಗಿಯೂ ಸುಗುಣೇಂದ್ರ ತೀರ್ಥರು ಘೋಷಿಸಿದ್ದಾರೆ. ಅಲ್ಲದೆ ಈ ಮೂಲಕ ನಾವು ಬರೆಯುವ ಭಗವದ್ಗೀತೆ ಭವಿಷ್ಯದಲ್ಲಿ ಉತ್ತರೋತ್ತರ ನಮ್ಮ ಮನೆಗಳಲ್ಲಿ ಶ್ರೀ ಕೃಷ್ಣ ಹಾಗೂ ಹಿರಿಯರ ಸ್ಮರಣೆಯಲ್ಲಿ ಅಧ್ಯಯನ ಪೂಜಾ ಗ್ರಂಥವಾಗಿ ಮನೆ ಮನಗಳ ಬೆಳಗುವಂಥಾಗಬೇಕು ಎಂದು ಶ್ರೀಗಳು ಸಂದೇಶವನ್ನು ರವಾನಿಸಿದ್ದಾರೆ.
- ಶ್ರೀಸುತ, ಜಂಬೂರು