ಸುಂಟಿಕೊಪ್ಪ, ಏ.೧೧: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೫ ನೇ ವಾರ್ಷಿಕ ಮಹೋತ್ಸವಕ್ಕೆ ತಾ. ೧೭ ರಿಂದ ೧೯ ರವರೆಗೆ ವಿವಿಧ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿದ್ಯುಕ್ತವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ತಾ. ೧೭ರಂದು ಪೂರ್ವಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಸಂಜೆ ೭ ಗಂಟೆಯಿAದ ದೀಪರಾಧನೆ ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಶ್ರೀ ಚಾಮುಂಡಿ ತಂಡದಿAದ ಚಂಡೆ ಮೇಳ ಜರುಗಲಿದೆ. ತಾ. ೧೮ ರಂದು ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆ ನಡೆಯಲಿದೆ. ರಾತ್ರಿಯಿಂದ ವಿವಿಧ ದೈವಗಳ ಕೋಲ ನಡೆಯಲಿದ್ದು, ತಾ. ೧೯ರ ಪೂರ್ವಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ ೮ ಗಂಟೆಗೆ ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ ಸಮಿತಿ ತಿಳಿಸಿದೆ.