(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಏ. ೧೦ : ಆಧುನಿಕ ಪ್ರಪಂಚ ಮುಂದುವರೆಯುತ್ತಿದ್ದAತೆಯೇ ವೈಜ್ಞಾನಿಕವಾಗಿ ಹಲವು ಆವಿಷ್ಕಾರಗಳು ದಿನದಿಂದ ದಿನಕ್ಕೆ ಅನುಷ್ಠಾನಗೊಳ್ಳುತ್ತಿವೆ. ಈ ಸಾಲಿನಲ್ಲಿ ಚೆಸ್ಕಾಂ ಇಲಾಖೆಯು ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಕೋಟ್ಯಂತರ ಹಣವನ್ನು ವಿನಿಯೋಗಿಸುವ ಮೂಲಕ ವಿದ್ಯುತ್ ಗ್ರಾಹಕನಿಗೆ ಅನುಕೂಲವಾಗಲು ಹಾಗೂ ಆಗಿಂದ್ದಾಗ್ಗೆ ವಿದ್ಯುತ್ ಅಡಚಣೆಯನ್ನು ತಪ್ಪಿಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿತ್ತು. ಇದರ ಭಾಗವಾಗಿ ನಗರ ಪ್ರದೇಶದಲ್ಲಿ ಅಳವಡಿಸಲಾಗುತ್ತಿದ್ದ ವಿದ್ಯುತ್ ಎಬಿ ಕೇಬಲ್‌ಗಳನ್ನು ಗ್ರಾಮೀಣ ಭಾಗದಲ್ಲಿ ಅಳವಡಿಸಲು ಮುಂದಾಯಿತು. ಆದರೆ ಇದರಿಂದ ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಆಶಾ ಭಾವನೆಯಲ್ಲಿದ್ದ ವಿದ್ಯುತ್ ಗ್ರಾಹಕರಿಗೆ ನಿರಾಸೆಯಾಗಿದೆ. ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ ಅಳವಡಿಸಿದ್ದ ಎ.ಬಿ. (ಏರಿಯಲ್ ಬಂಚ್‌ಡ್) ವಿದ್ಯುತ್ ಕೇಬಲ್ ಇದೀಗ ಬಾಳೆಲೆಯ ಚೆಸ್ಕಾಂ ಕಚೇರಿಯ ಆವರಣ ಹಾಗೂ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ರೂ. ೨ ಕೋಟಿ ಮಣ್ಣು ಪಾಲಾಗಿದೆ.

ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ನೀಗಿಸಲು ಕಳೆದ ಎರಡು ವರ್ಷಗಳ ಹಿಂದೆ ಪೊನ್ನಂಪೇಟೆ - ಕಿರುಗೂರು- ಪೊನ್ನಪ್ಪಸಂತೆ - ಬಾಳೆಲೆ ಭಾಗಕ್ಕೆ ಹಾಗೂ ಪೊನ್ನಂಪೇಟೆ - ಬೆಸಗೂರು - ಕಾನೂರು ಭಾಗಕ್ಕೆ ಒಟ್ಟು ರೂ. ೨.೫ ಕೋಟಿ ವೆಚ್ಚದಲ್ಲಿ ಆಧುನಿಕ ಎ.ಬಿ. ವಿದ್ಯುತ್ ಕೇಬಲ್‌ನ್ನು ಅಳವಡಿಸಲಾಗಿತ್ತು. ಈ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ಕೊಡಗಿನ ಹವಾಮಾನಕ್ಕೆ ಹೊಂದಿಕೊಳ್ಳದ ಕಳಪೆಮಟ್ಟದ ಕೇಬಲ್‌ಗಳನ್ನು ಅಳವಡಿಸಿ ಈ ಯೋಜನೆಯನ್ನು ಹಳ್ಳಹಿಡಿಸಿದ್ದರು. ಈ ಕೇಬಲ್‌ನಿಂದ ಗ್ರಾಹಕರಿಗೆ ವಿದ್ಯುತ್ ನೀಡಲು ಸಾಧ್ಯವಾಗಲೇ ಇಲ್ಲ. ಇದರಿಂದ ಎಚ್ಚೆತ್ತುಕೊಂಡ ಚೆಸ್ಕಾಂ ಇಲಾಖೆಯು ಈ ಹಿಂದೆ ಅಳವಡಿಸಿದ್ದ ವಿದ್ಯುತ್ ಮಾರ್ಗದಿಂದಲೇ ಗ್ರಾಹಕರಿಗೆ ವಿದ್ಯುತ್ ನೀಡುತ್ತಿದೆ.

(ಮೊದಲ ಪುಟದಿಂದ) ಸರ್ಕಾರ ಕೋಟ್ಯಂತರ ಹಣವನ್ನು ಈ ಯೋಜನೆಗೆ ಬಿಡುಗಡೆಗೊಳಿಸಿತ್ತು. ಇದರ ಅನುಷ್ಠಾನಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾಮಗಾರಿಯ ಗುತ್ತಿಗೆ ಪಡೆದ ಹೊರ ಜಿಲ್ಲೆಯ ಗುತ್ತಿಗೆದಾರರು ಕಾಟಾಚಾರಕ್ಕೆ ಕಾಮಗಾರಿ ಮುಗಿಸಿದ್ದು, ಇದರಿಂದ ಯಾವುದೇ ಪ್ರಯೋಜನ ಗ್ರಾಹಕರಿಗೆ ದೊರೆಯಲಿಲ್ಲ. ರಸ್ತೆಯ ಉದ್ದಗಲಕ್ಕೂ ಜೋತು ಬೀಳುವ ಸ್ಥಿತಿಯಲ್ಲಿ ಈ ಎ.ಬಿ. ವಿದ್ಯುತ್ ಕೇಬಲ್‌ನ್ನು ಅಳವಡಿಸಲಾಗಿತ್ತು. ಹಲವು ಸಂಘ-ಸAಸ್ಥೆಗಳು ಚೆಸ್ಕಾಂ ಕಾರ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದವು.

ರಸ್ತೆಯ ಬದಿಯಲ್ಲಿದ್ದ ಸುಮಾರು ೨೬ ಕಿ.ಮೀ. ಉದ್ದದ ಎ.ಬಿ. ವಿದ್ಯುತ್ ಕೇಬಲ್‌ನ್ನು ಇದೀಗ ವಿದ್ಯುತ್ ಕಂಬದಿAದ ತೆರವುಗೊಳಿಸಿ, ಕಳಪೆ ಗುಣಮಟ್ಟದ ಕೇಬಲ್ ಅನ್ನು ಬಾಳೆಲೆಯ ಚೆಸ್ಕಾಂ ಕಚೇರಿ ಮುಂದೆ ರಾಶಿ ಹಾಕಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.