ಸಿಎಂ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ತಂದ ಡಿಕೆಶಿ

ಬೆಂಗಳೂರು/ಚಿಕ್ಕಮಗಳೂರು, ಏ. ೧೦: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿಯ ಮಾತುಗಳು ಕೇಳಿಬರುತ್ತಿರುವಂತೆಯೇ, ಇದೀಗ ಡಿಕೆಶಿ ಸಿಎಂ ರೇಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತರುವ ಪ್ರಯತ್ನ ಮಾಡಿದ್ದಾರೆ. ಇದು ಪಕ್ಷದ ವಲಯದಲ್ಲಿ ಕಣ್ಣು ಕೆಂಪಾಗುವAತೆ ಮಾಡಿದೆ. ಖರ್ಗೆ ಬೆಂಬಲಿಸುವ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಪಕ್ಷದೊಳಗೆ ‘ದಲಿತ ಸಿಎಂ' ಮತ್ತು ‘ಸ್ಥಳೀಯ ವರ್ಸಸ್ ವಲಸಿಗರು' ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯಕ್ಕೆ ಹಳ್ಳ ತೋಡುವ ಯತ್ನವಾಗಿದೆ ಎಂದು ಪಕ್ಷದವರೇ ಹೇಳುತ್ತಿದ್ದಾರೆ. ಒಂದು ವೇಳೆ ಖರ್ಗೆ ಸಿಎಂ ಆಗುವುದಾದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೀರಾ ಎಂಬ ಪ್ರಶ್ನೆಗೆ ಶಿವಕುಮಾರ್ ನೀಡಿದ ಉತ್ತರದಿಂದ ಈ ಎಲ್ಲಾ ಚರ್ಚೆಗಳು ಆರಂಭವಾಗಿವೆ. ಖರ್ಗೆ ಅವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಅವರು ರಾಜ್ಯ ಮತ್ತು ದೇಶಕ್ಕೆ ಆಸ್ತಿ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ, ಅವರು ನನಗಿಂತ ೨೦ ವರ್ಷ ಹಿರಿಯರು, ಅವರ ಆಶಯಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಡಿಕೆಶಿ ಹೇಳಿದರು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ, ಹಿರಿಯವರಾಗಿರುವ ಖರ್ಗೆ ಅವರನ್ನು ಬೆಂಬಲಿಸದಿದ್ದರೆ ನಾವು ಮನುಷ್ಯರೇ? ನಾವು ಮುಖ್ಯವಲ್ಲಾ, ಪಕ್ಷ ಅಧಿಕಾರಕ್ಕೆ ಬರುವುದು ಪ್ರಮುಖ ಎಂದರು. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ‘ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ’ ಎಂದು ಹೇಳಿದ್ದಾರೆ.

ಯುಪಿಎಸ್‌ಸಿ ಮೂಲಕ ನೇಮಕಗೊಂಡ ಅಧಿಕಾರಿಗಳು ಡಕಾಯಿತರು : ಕೇಂದ್ರ ಸಚಿವ

ಬಾಲಸೋರ್, ಏ. ೨೦: ಕೇಂದ್ರ ಲೋಕಸೇವಾ ಆಯೋಗದ ಮೂಲಕ ನೇಮಕಗೊಂಡ ಅನೇಕ ಅಧಿಕಾರಿಗಳು ಡಕಾಯಿತರು ಎಂದು ಕೇಂದ್ರ ಸಚಿವ ಬಿಶ್ವೇಶ್ವರ ತುಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಲಸೋರ್ ಜಿಲ್ಲೆಯ ಬಲಿಪಾಲ್‌ನಲ್ಲಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವರು, ‘ನಾನು ದೆಹಲಿಯಲ್ಲಿ ವಾಸಿಸುವ ಹಿಂದೆ ಯುಪಿಎಸ್‌ಸಿ ಕಟ್ಟಡವಿದೆ' ಅಲ್ಲಿ ಜಾಗತಿಕ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಆ ಕಟ್ಟಡದ ಚಟುವಟಿಕೆಗಳನ್ನು ಗಮನಿಸಿದಾಗ ವಿಶ್ವ ದರ್ಜೆಯ ಅಧಿಕಾರಿಗಳು ದೊಡ್ಡ ಡಕಾಯಿತರು ಎಂದು ತಿಳಿದು ಬಂದಿದೆ. ಈ ಹಿಂದೆ ಅಧಿಕಾರಿಗಳ ಬಗ್ಗೆ ನನಗೆ ಭಿನ್ನ ಅಭಿಪ್ರಾಯವಿತ್ತು. ಅವರು ಬುದ್ಧಿವಂತರು ಎಂದು ನಾನು ಭಾವಿಸಿದೆ. ಆದರೆ, ಈಗ ಅವರು ದೊಡ್ಡ ಡಕಾಯಿತರು ಎಂದು ನನಗೆ ಅನಿಸಿತು ಎಂದು ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಯುಪಿಎಸ್‌ಸಿ ಮೂಲಕ ನೇಮಕಗೊಂಡವರ ಬಗ್ಗೆ ನನಗೊಂದು ಕಲ್ಪನೆ ಇತ್ತು. ಅವರು ಅತ್ಯಂತ ಜ್ಞಾನದ ವ್ಯಕ್ತಿ ಮತ್ತು ಯಾವಾಗಲೂ ಉನ್ನತ ಸ್ಥಾನಗಳನ್ನು ಆಕ್ರಮಿಸುತ್ತಾರೆ. ಆದರೆ ಅಲ್ಲಿಂದ ಅರ್ಹತೆ ಪಡೆದವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ಈಗ ನನಗೆ ಅನಿಸುತ್ತಿದೆ. ನಾನು ಶೇಕಡಾ ೧೦೦ ಎಂದು ಹೇಳುವುದಿಲ್ಲ, ಆದರೆ ಅವರಲ್ಲಿ ಹಲವರು ಡಕಾಯಿತರಿದ್ದಾರೆ ಎಂದಿದ್ದಾರೆ. ಯುಪಿಎಸ್‌ಸಿ ದೇಶದ ಪ್ರಧಾನ ಕೇಂದ್ರ ನೇಮಕಾತಿ ಆಯೋಗವಾಗಿದೆ. ಇದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳನ್ನು ನೇಮಿಸುತ್ತದೆ. ತುಡು ಅವರು ತಮ್ಮ ಭಾಷಣದಲ್ಲಿ, ಅಂತಹ ವಿದ್ಯಾವಂತರಿದ್ದರೆ ನಮ್ಮ ಸಮಾಜ ಏಕೆ ಭ್ರಷ್ಟಾಚಾರ ಮತ್ತು ಅನ್ಯಾಯದ ಸುಳಿಯಲ್ಲಿ ಮುಳುಗಿದೆ ಎಂದು ಪ್ರಶ್ನಿಸಿದರು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆಯೇ ಇದಕ್ಕೆ ಕಾರಣ. ನಮ್ಮಲ್ಲಿ ಅಧ್ಯಾತ್ಮಿಕ ಶಿಕ್ಷಣ ಮತ್ತು ವಿಚಾರಗಳ ಕೊರತೆ ಇದೆ ಎಂದರು.

ನ್ಯಾಯಾAಗ ವ್ಯವಸ್ಥೆ ಸುಧಾರಣೆ: ಭರವಸೆ ಉಳಿಸಿಕೊಂಡ ನ್ಯಾಯಮೂರ್ತಿ ಚಂದ್ರಚೂಡ್!

ನವದೆಹಲಿ, ಏ. ೧೦: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನವೆಂಬರ್ ೯, ೨೦೨೨ ರಂದು ೫೦ ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದರು. ಅದರಂತೆ ನೋಂದಾವಣೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತಂದಿದ್ದಾರೆ. ತಾವು ಪ್ರಮಾಣ ವಚನ ಸ್ವೀಕರಿಸುವ ವೇಳೆ ನೀಡಿದ್ದ ಭರವಸೆಯಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ನನ್ನ ಕೆಲಸವು ಕೇವಲ ಮಾತಿನಲ್ಲಿರುವುದಿಲ್ಲ, ನಾನು ಮಾಡಿದ ಕೆಲಸಗಳು ನನ್ನ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದ್ದರು. ನ್ಯಾಯವು ಎಂದಿಗೂ ಸಾರ್ವಭೌಮ ಕಾರ್ಯವಲ್ಲ, ಅದು ನಾಗರಿಕರಿಗೆ ಒದಗಿಸಲಾದ ಅತ್ಯಗತ್ಯ ಸೇವೆಯಾಗಿದೆ. ಅಧಿಕಾರ ವಹಿಸಿಕೊಂಡ ನಂತರ ಅವರು ಪರಿಚಯಿಸಿದ ನ್ಯಾಯಾಂಗ ಸುಧಾರಣೆಗಳು ಸಾಮಾನ್ಯ ಜನರಿಗೆ ನ್ಯಾಯದ ಪ್ರವೇಶವನ್ನು ಖಾತ್ರಿಪಡಿಸುವಲ್ಲಿ ಅವರ ಬದ್ಧತೆಯನ್ನು ತೋರಿಸಿದೆ. ನಾಗರಿಕರು ಅನುಸರಿಸುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ತಲುಪಲು, ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ (ಎಸ್‌ಸಿ) ೭೪ ನೇ ಗಣರಾಜ್ಯೋತ್ಸವದಂದು ಹದಿಮೂರು ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಿದ ೧,೦೦೦ ತೀರ್ಪುಗಳನ್ನು ಬಿಡುಗಡೆ ಮಾಡಿದೆ.

ತಲೆಮರೆಸಿಕೊಂಡಿರುವ ಅಮೃತಪಾಲ್ ಸಿಂಗ್ ಆಪ್ತನ ಬಂಧನ

ಚAಡೀಗಢ, ಏ. ೧೦: ತೀವ್ರಗಾಮಿ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಎಂಬಾತನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಪೊಲೀಸರು ಮತ್ತು ಕೌಂಟರ್ ಇಂಟೆಲಿಜೆನ್ಸ್ ವಿಭಾಗವೂ ಕಾರ್ಯಾಚರಣೆ ನಡೆಸಿ ಪಾಪಾಲ್‌ಪ್ರೀತ್ ನನ್ನು ಬಂಧಿಸಿದೆ. ಪಾಪಲ್‌ಪ್ರೀತ್ ಅಮೃತಪಾಲ್‌ನ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು ಇತ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕದಲ್ಲಿ ಎಂದು ವರದಿಯಾಗಿದೆ. ಪಂಜಾಬ್ ಪೊಲೀಸರು ಖಲಿಸ್ತಾನ್ ಬೆಂಬಲಿಗರು ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮೃತಪಾಲ್ ಮತ್ತು ಪಾಪಲ್‌ಪ್ರೀತ್ ಮಾರ್ಚ್ ೧೮ರಿಂದ ತಲೆಮರೆಸಿಕೊಂಡಿದ್ದರು. ತೀವ್ರಗಾಮಿ ಅಮೃತಪಾಲ್ ಸಿಂಗ್ ಮಾರ್ಚ್ ೧೮ರಂದು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಂಧನದಿAದ ತಪ್ಪಿಸಿಕೊಂಡು ಹಲವಾರು ವಾಹನಗಳನ್ನು ಬದಲಾಯಿಸಿ ಪರಾರಿಯಾಗಿದ್ದನು. ಇಬ್ಬರು ಮತ್ತು ಅವರ ಸಹಚರರ ವಿರುದ್ಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಲು, ಕೊಲೆಗೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.