ಮಡಿಕೇರಿ, ಏ. ೧೦: ಭಾಗಮಂಡಲ ಹೋಬಳಿಯ ಬೇಂಗೂರು ಗ್ರಾಮದಲ್ಲಿ ಪ್ರಾಯೋಗಿಕವಾಗಿ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲು ಸರ್ವೆ ನಡೆಸುವಂತೆ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಆದೇಶ ಹೊರಡಿಸಲಾಗಿದ್ದು, ಈ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಿ, ಚುನಾವಣೆ ಬಳಿಕ ಪ್ರಕ್ರಿಯೆ ನಡೆಸಬೇಕು. ಒಂದು ವೇಳೆ ಜನರನ್ನು ಕತ್ತಲೆಯಲ್ಲಿಟ್ಟು ಸರ್ವೆ ಕಾರ್ಯ ನಡೆಸಿದರೆ, ತಡೆಯೊಡ್ಡುವುದಾಗಿ ಸೇವ್ ಕೊಡಗು ವೇದಿಕೆ ಎಚ್ಚರಿಸಿದೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿ ಕೆ.ಬಿ.ಬೋಪಣ್ಣ, ಬಾಣೆ ಜಮೀನಿಗೆ ಕಂದಾಯ ನಿಗದಿ ಮಾಡುವ ಕ್ರಮ ಸ್ವಾಗತಾರ್ಹ, ಆದರೆ ಜಿಲ್ಲೆಯ ಜನರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಸರ್ವೆ ಪ್ರಕ್ರಿಯೆ ಬಗ್ಗೆ ವಿವರಿಸದೆ ಏಕಾಏಕಿ ಚುನಾವಣೆ ಸಂದರ್ಭದಲ್ಲಿ ಏ.೧ ರಿಂದಲೇ ಸರ್ವೆ ಕಾರ್ಯ ಆರಂಭಿಸಬೇಕೆAದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆದೇಶ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಪರಿಸರವಾದಿಗಳ ಒತ್ತಡವಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಕಂದಾಯ ಇಲಾಖೆ ಕಂದಾಯ ಅದಾಲತ್ ನಡೆಸುವ ಮೂಲಕ ಕಂದಾಯ ನಿಗದಿ ಮತ್ತು ಸರ್ವೆ ಕಾರ್ಯದ ಬಗ್ಗೆ ಬಾಣೆ ಜಮೀನು ಹೊಂದಿರುವವರಿಗೆ ಸಂಪೂರ್ಣ ಸ್ವಾಗತಾರ್ಹ, ಆದರೆ ಜಿಲ್ಲೆಯ ಜನರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಸರ್ವೆ ಪ್ರಕ್ರಿಯೆ ಬಗ್ಗೆ ವಿವರಿಸದೆ ಏಕಾಏಕಿ ಚುನಾವಣೆ ಸಂದರ್ಭದಲ್ಲಿ ಏ.೧ ರಿಂದಲೇ ಸರ್ವೆ ಕಾರ್ಯ ಆರಂಭಿಸಬೇಕೆAದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆದೇಶ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಪರಿಸರವಾದಿಗಳ ಒತ್ತಡವಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಕಂದಾಯ ಇಲಾಖೆ ಕಂದಾಯ ಅದಾಲತ್ ನಡೆಸುವ ಮೂಲಕ ಕಂದಾಯ ನಿಗದಿ ಮತ್ತು ಸರ್ವೆ ಕಾರ್ಯದ ಬಗ್ಗೆ ಬಾಣೆ ಜಮೀನು ಹೊಂದಿರುವವರಿಗೆ ಸಂಪೂರ್ಣ ಯಾರ ಹೆಸರಿನಲ್ಲಿ ಬಾಣೆ ಜಾಗ ಇದೆಯೋ ಅವರ ಹೆಸರಿನಲ್ಲಿ ಕಂದಾಯ ನಿಗದಿಯಾಗಬೇಕು. ಆದರೆ ಈಗ ಪಟ್ಟೆದಾರನ ಹೆಸರಿಗೆ ಕಂದಾಯ ನಿಗದಿಯಾಗುತ್ತದೆ. ಇದರಿಂದ ಬಾಣೆ ಜಾಗದ ಪಾಲು

(ಮೊದಲ ಪುಟದಿಂದ) ಹೊಂದಿರುವ ಕುಟುಂಬದ ಇತರ ಸದಸ್ಯರಿಗೆ ಅನ್ಯಾಯವಾಗುತ್ತದೆ. ಪಟ್ಟೆದಾರ ಒಬ್ಬನ ಹೆಸರಿಗೆ ಮಾತ್ರ ಕಂದಾಯ ನಿಗದಿಯಾದರೆ ದುರುಪಯೋಗವಾಗುವ ಸಾಧ್ಯತೆಗಳೇ ಹೆಚ್ಚು. ಮೊದಲು ಆರ್‌ಟಿಸಿಯಲ್ಲಿ ಕುಟುಂಬದ ಸದಸ್ಯರುಗಳ ಹೆಸರು ಬರುತ್ತಿತ್ತು. ಆದರೆ ಈಗ ಪಟ್ಟೆದಾರನ ಹೆಸರು ಮಾತ್ರ ಬರುತ್ತಿದ್ದು, ಇತರ ಸದಸ್ಯರ ಹೆಸರಿಗೆ ಕಂದಾಯ ನಿಗದಿ ಮಾಡುತ್ತಿಲ್ಲ. ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆ.ಬಿ.ಬೋಪಣ್ಣ ಆರೋಪಿಸಿದರು.

೨೦೧೩ ರಲ್ಲಿ ಬಾಣೆ ಜಾಗಕ್ಕೆ ಕಂದಾಯ ನಿಗದಿ ಮಾಡಲು ರಾಷ್ಟçಪತಿಗಳು ಅಂಕಿತ ಹಾಕಿದರು. ಇಲ್ಲಿಯವರೆಗೆ ಕಂದಾಯ ನಿಗದಿಯಾಗದೆ ಇದ್ದ ಪ್ರಕರಣಕ್ಕೆ ಚುನಾವಣೆ ಸಂದರ್ಭದಲ್ಲಿ ಚಾಲನೆ ನೀಡಿದ ಉದ್ದೇಶವಾದರು ಏನು ಎಂದು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಸೇವ್ ಕೊಡಗು ವೇದಿಕೆ ಪದಾಧಿಕಾರಿಗಳಾದ ಬಿ.ಟಿ. ದಿನೇಶ್, ಜಿನ್ನು ನಾಣಯ್ಯ, ಉದಯಶಂಕರ್, ಬೇಂಗೂರು ಗ್ರಾ.ಪಂ.ಗೆ. ಒಳಪಟ್ಟ ನಿವಾಸಿಗಳಾದ ಎ.ಬಿ. ಬೆಳ್ಯಪ್ಪ, ಕೆ. ಸಂತೋಷ್ ಉಪಸ್ಥಿತರಿದ್ದರು.