(ಕಾಯಪAಡ ಶಶಿ ಸೋಮಯ್ಯ)

ನಾಪೋಕ್ಲು, ಏ. ೯: ಸುಮಾರು ೨೫ ಸಾವಿರದಷ್ಟು ಜನಸ್ತೋಮ, ಕಿಕ್ಕಿರಿದು ತುಂಬಿದ್ದ ಹಾಕಿ ಪ್ರೇಮಿಗಳು, ಭಾರತ ಹಾಕಿ ತಂಡದ ಕೋಚ್ ಸೇರಿದಂತೆ ದೇಶದ ಹಲವು ಹೆಸರಾಂತ ಒಲಂಪಿಯನ್‌ಗಳ ಉಪಸ್ಥಿತಿಯ ಉತ್ತೇಜನದ ನಡುವೆ ೨೩ನೇಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಹೊಸ ಚಾಂಪಿಯನ್ ಆಗಿ ಕೈಕೇರಿಯ ಕುಪ್ಪಂಡ ಕುಟುಂಬ ಹೊರ ಹೊಮ್ಮಿತು. ಈ ಮೂಲಕ ಚೊಚ್ಚಲ ಹಾಕಿ ಕಿರೀಟ ಧರಿಸುವ ಮೂಲಕ ಕುಪ್ಪಂಡ ಕೌಟುಂಬಿಕ ಹಾಕಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಮಾಜಿ ಚಾಂಪಿಯನ್ ಕುಟುಂಬವಾಗಿರುವ ಮೂರು ಬಾರಿ ಚಾಂಪಿಯನ್ ಆಗಿದ್ದ ಕುಲ್ಲೇಟಿರ ಕುಟುಂಬ ೧೬ ವರ್ಷಗಳ ಅಂತರದ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗುವ ಕನಸ್ಸನ್ನು ಕೈಚೆಲ್ಲಿ ನಿರಾಶೆ ಅನುಭವಿಸಿದೆ.

ಕೊಡವ ಕೌಟುಂಬಿಕ ಹಾಕಿ ನಮ್ಮೆಯ ೨೩ನೇಯ ವರ್ಷದ ಅಂಗವಾಗಿ ಈ ಬಾರಿ ನಡೆದ ಅಪ್ಪಚೆಟ್ಟೋಳಂಡ ಕಪ್ - ೨೦೨೩ನೇ ಕುಪ್ಪಂಡ ‘ಒಡೆಯ’ ಆಗಿದ್ದು, ಹಾಕಿ ನಮ್ಮೆಯಲ್ಲಿ ಹೊಸ ತಂಡ ಚಾಂಪಿಯನ್ ಆಗಬೇಕೆಂಬ ನಿರೀಕ್ಷೆ ಹೊಂದಿದ್ದ ಸಾವಿರಾರು ಕ್ರೀಡಾಭಿಮಾನಿಗಳಿಗೆ ಸಂತಸ ಮೂಡಿಸಿತು. ಆದರೆ, ನಾಲ್ಕುನಾಡು ವಿಭಾಗದವರೇ ಆಗಿದ್ದು, ಕಳೆದ ಹಲವು ವರ್ಷಗಳ ಅಂತರದ ಬಳಿಕ ಫೈನಲ್ ತಲುಪಿದ್ದ ಕುಲ್ಲೇಟಿರ ಕುಟುಂಬ ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂಬ ಆಶಾಭಾವನೆಯಲ್ಲಿದ್ದ ಕುಲ್ಲೇಟಿರ ಅಭಿಮಾನಿಗಳು ಕೇವಲ ರನ್ನರ್ಸ್ ಪ್ರಶಸ್ತಿಗೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಯಿತು.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಕಿಕ್ಕಿರಿದು ನೆರೆದಿದ್ದ ಭಾರೀ ಸಂಖ್ಯೆಯ ಹಾಕಿ ಅಭಿಮಾನಿಗಳು ರೋಚಕ ಪಂದ್ಯವೊAದನ್ನು ವೀಕ್ಷಿಸಿದರು. ಇತ್ತಂಡಗಳ ಸಮಬಲದ ಪ್ರದರ್ಶನ ಪ್ರೇಕ್ಷಕರನ್ನು ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

ಭಾರತ ಹಾಕಿ ತಂಡದ ಮಾಜಿ ಆಟಗಾರರು, ಒಲಂಪಿಯನ್‌ಗಳಾದ ಧನರಾಜ್ ಪಿಳ್ಳೆ, ಜಾಫರ್ ಇಕ್ಬಾಲ್, ಕೊಡಗಿನ ಒಲಂಪಿಯನ್‌ಗಳಾದ ಡಾ|| ಅಂಜಪರವAಡ ಸುಬ್ಬಯ್ಯ, ಚೆಪ್ಪುಡೀರ ಪೂಣಚ್ಚ, ಭಾರತ ಹಾಕಿ ತಂಡದ ಕೋಚ್ ಡೇವಿಡ್ ಜಾನ್, ಬಿ.ಜೆ. ಕಾರ್ಯಪ್ಪ, ಡೇವಿಡ್ ಜಾನ್ ಅವರ ಪತ್ನಿ ಆಸ್ಟೆçÃಲಿಯಾದ ಮಾಜಿ ಹಾಕಿ ಆಟಗಾರ್ತಿ, ಒಲಂಪಿಯನ್ ಲೀ ಕ್ಯಾಪ್ಸ್ ಅವರುಗಳಂತಹ ಪ್ರಮುಖರು ಅಪ್ಪಚೆಟ್ಟೋಳಂಡ ಕಪ್‌ನ ಫೈನಲ್ ಪಂದ್ಯವನ್ನು ಸಾಕ್ಷೀಕರಿಸಿದ್ದು, ಈ ಬಾರಿ ವಿಶೇಷವಾಗಿತ್ತು.

ರೋಚಕ ಪಂದ್ಯ

ಪAದ್ಯದ ಆರಂಭದಿAದಲೂ ಕುಪ್ಪಂಡ - ಕುಲ್ಲೇಟಿರ ಸಮಬಲದ ಹೋರಾಟ ಪ್ರದರ್ಶಿಸಿತ್ತು. ಎರಡೂ ಗೋಲು ಆವರಣದತ್ತ ಆಯಾ ತಂಡಗಳ ಆಟಗಾರರು ನುಗ್ಗುತ್ತಿದ್ದುದು ಒಂದೆಡೆಯಾದರೆ ಇಬ್ಬರು ಗೋಲ್ ಕೀಪರ್‌ಗಳು ತೋರುತ್ತಿದ್ದ ರಕ್ಷಣೆ ಪ್ರೇಕ್ಷಕರಿಗೆ ಮುದ ನೀಡಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಇಂಡಿಯನ್ ಕ್ಯಾಂಪ್‌ನ ಆಟಗಾರ ಕುಪ್ಪಂಡ ಸೋಮಯ್ಯ ಆಕರ್ಷಕ ರಿವರ್ಸ್ ಫ್ಲಿಕ್ ಮೂಲಕ ತಂಡಕ್ಕೆ ಗೋಲು ಬಾರಿಸಿ ಮುನ್ನಡೆ ತಂದಿತ್ತರು. ಈ ಸಂದರ್ಭ ಕುಪ್ಪಂಡ ಪಾಳಯ ಸಂತಸದಲ್ಲಿ ತೇಲಾಡಿತು. ಆದರೆ, ಎರಡನೆಯ ಕ್ವಾರ್ಟರ್ ಮತ್ತಷ್ಟು ಪ್ರತಿದಾಳಿ ನಡೆಸಿ ಗಮನ ಸೆಳೆದ ಕುಲ್ಲೇಟಿರ ಕುಟುಂಬದ ಪರವಾಗಿ ಅವಿನಾಶ್ ಮಂದಪ್ಪ ಅತ್ಯಾಕರ್ಷಕ ಫೀಲ್ಡ್ ಗೋಲ್ ಬಾರಿಸಿ ಅಂತರವನ್ನು ಸಮನಾಗಿಸಿ ಪಂದ್ಯಕ್ಕೆ ಇನ್ನಷ್ಟು ರೋಚಕತೆ ತಂದಿತ್ತರು.

ಆದರೆ ನಂತರದ ಅವಧಿಯಲ್ಲಿ ಇತ್ತಂಡಗಳು ಗೋಲು ಬಾರಿಸುವಲ್ಲಿ ವಿಫಲರಾಗಿದ್ದರಿಂದ ನಿಗದಿತ ಅವಧಿ ಯಲ್ಲಿ ಅಂತರ ೧-೧ ರಿಂದ ಸಮನಾ ಗಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಧರಿಸಲು ಶೂಟೌಟ್ ನಿಯಮ ಅಳವಡಿಸಲಾಯಿತು. ಇದರಲ್ಲಿ ಕುಪ್ಪಂಡ ಗೋಲ್‌ಕೀಪರ್ (ಬಿ.ಎಸ್. ಎಫ್ ಆಟಗಾರ) ಸುಬ್ಬಯ್ಯ ತಡೆಗೋಡೆ ಯಾಗುವ

(ಮೊದಲ ಪುಟದಿಂದ) ಮೂಲಕ ಕುಪ್ಪಂಡ ತಂಡ ಚೊಚ್ಚಲ ಹಾಕಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದುದ್ದಕ್ಕೂ ಆಕರ್ಷಕ ಪ್ರದರ್ಶನ ನೀಡಿದ್ದ ಕುಲ್ಲೇಟಿರ ಗೋಲ್‌ಕೀಪರ್ ಇತ್ತೀಚೆಗಷ್ಟೆ ಕರ್ನಾಟಕ ಹಾಕಿ ತಂಡ (ಅಂಡರ್ ೧೯) ಪ್ರತಿನಿಧಿಸಿ ಸಾಧನೆ ತೋರಿರುವ ಯುವ ಆಟಗಾರ ವಚನ್ ಕಾಳಪ್ಪ ಅವರನ್ನು ಕುಪ್ಪಂಡ ತಂಡದ ಅನುಭವಿಗಳು ವಂಚಿಸಿ ಗೋಲು ದಾಖಲಿಸಿದಾಗ ಕುಪ್ಪಂಡ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಅಂತಿಮವಾಗಿ ಕುಪ್ಪಂಡ ೫-೩ ಗೋಲಿನಿಂದ ಕುಲ್ಲೇಟಿರ ಎದುರು ಅರ್ಹ ಜಯದೊಂದಿಗೆ ಕೌಟುಂಬಿಕ ಹಾಕಿಯಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಧರಿಸಿ ಇತಿಹಾಸ ಸೃಷ್ಟಿಸಿತು. ಕುಪ್ಪಂಡ ಪರ ಸೋಮಯ್ಯ (೨) ನಾಚಪ್ಪ, ಜಗನ್, ಪ್ರಧಾನ್ ಗೋಲು ಗಳಿಸಿದರೆ, ಕುಲ್ಲೇಟಿರ ಪರ ಅವನೀಶ್ ಮಂದಪ್ಪ, ನಾಚಪ್ಪ, ಯತಿನ್ ಗೋಲುಗಳಿಸಿದರು. ಪಂದ್ಯದ ತೀರ್ಪುಗಾರರಾಗಿ ಅಂತರರಾಷ್ಟಿçÃಯ ಅಂಪೈರ್ ಕೊಂಡೀರ ಕೀರ್ತಿ, ಚೆಯ್ಯಂಡ ಲವ ಅಪ್ಪಚ್ಚು ಹಾಗೂ ಮೂರನೇ ಅಂಪೈರ್ ಆಗಿ ಚಂದಪAಡ ಆಕಾಶ್ ಕಾರ್ಯನಿರ್ವಹಿಸಿದರು.

ಫೈನಲ್ ಪಂದ್ಯಕ್ಕೆ ಮುನ್ನ ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದ ನೆಲ್ಲಮಕ್ಕಡ ಹಾಗೂ ಪಳಂಗAಡ ನಡುವೆ ಹಣಾಹಣಿ ನಡೆಯಿತು. ಇದರಲ್ಲಿ ನೆಲ್ಲಮಕ್ಕಡ ಕುಟುಂಬ ೧-೦ ಗೋಲಿನಿಂದ ಜಯಗಳಿಸಿ ರೂ. ೧ ಲಕ್ಷ ನಗದು ಹಾಪಳಂಗAಡ ಕುಟುಂಬ ನಾಲ್ಕನೇ ಸ್ಥಾನಗಳಿಸಿದ ಕುಟುಂಬವಾಗಿ ಹೊರಹೊಮ್ಮಿದ್ದು, ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.ಗೂ ಟ್ರೋಫಿ ಗಳಿಸಿತು.