ಮಡಿಕೇರಿ, ಏ. ೯: ಬ್ಲ್ಯಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ಕೊಡಗು ವತಿಯಿಂದ ಇದೇ ಮೊದಲ ಬಾರಿಗೆ ಮರಗೋಡಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟ ಸಂಭ್ರಮದಿAದ ನಡೆಯಿತು. ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಉರಿ ಬಿಸಿಲಿನ ನಡುವೆ ನಡೆದ ಮಡಿಕೇರಿ, ಏ. ೯: ಬ್ಲ್ಯಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ಕೊಡಗು ವತಿಯಿಂದ ಇದೇ ಮೊದಲ ಬಾರಿಗೆ ಮರಗೋಡಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟ ಸಂಭ್ರಮದಿAದ ನಡೆಯಿತು. ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಉರಿ ಬಿಸಿಲಿನ ನಡುವೆ ನಡೆದ ಫೈನಲ್ ಪಂದ್ಯಾಟ ಮದೆ ಹಾಗೂ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ನಡೆದು ೧೧-೨೫, ೭-೨೫ ಅಂಕಗಳೊAದಿಗೆ ಪಿಂಕ್ ಪ್ಯಾಂಥರ್ಸ್ ಜಯಗಳಿಸಿ ಫೈನಲ್ ಪ್ರವೇಶಿಸಿತು. ನಿಲೆಟ್ ಕೊಕೇರಿ ಹಾಗೂ ಕಾಂತೂರು ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ೬-೨೫, ೧೨-೨೫ ಅಂಕಗಳೊAದಿಗೆ ಕಾಂತೂರು ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತು.
ಕಾಂತೂರು ಹಾಗೂ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ ೧೧-೨೫, ೧೦-೨೫ ಅಂಕಗಳೊAದಿಗೆ ಪಿಂಕ್ ಪ್ಯಾಂಥರ್ಸ್ ತಂಡ ಗೆಲುವಿನ ನಗೆ ಬೀರಿತು. ಕಾಂತೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಥ್ರೋಬಾಲ್ ಫೈನಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ದಾನಿಗಳಾದ ದಿವ್ಯ ಮಂಥರ್ ಗೌಡ, ನಂದ, ಚಂದ್ರಶೇಖರ್, ಬಿದ್ರುಪಣೆ ಬಸಪ್ಪ, ಬಾಣೆಗದ್ದೆ ಸುಜಿತ್ ಮತ್ತಿತರರು ಪಾಲ್ಗೊಂಡಿದ್ದರು. ಥ್ರೋಬಾಲ್‌ನಲ್ಲಿ ಮೊದಲ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ನಗದು - ಟ್ರೋಫಿ, ದ್ವಿತೀಯ ಸ್ಥಾನ ಪಡೆದ
(ಮೊದಲ ಪುಟದಿಂದ) ತಂಡಕ್ಕೆ ೧೦ ಸಾವಿರ ನಗದು - ಟ್ರೋಫಿ ವಿತರಿಸಲಾಯಿತು.
ವಾಲಿಬಾಲ್‌ನ ಮೊದಲ ಸೆಮಿಫೈನಲ್ ಪಂದ್ಯ ಸಿರಾಜ್ ಫ್ರೆಂಡ್ಸ್ ಹಾಗೂ ದೇವಸ್ತೂರು ಬ್ಲ್ಯಾಕ್ ಪ್ಯಾಂಥರ್ಸ್ ನಡುವೆ ನಡೆದು ೩೦-೨೮, ೨೫-೧೫, ೧೮-೧೬ ಅಂಕಗಳೊAದಿಗೆ ದೇವಸ್ತೂರು ಬ್ಲ್ಯಾಕ್ ಪ್ಯಾಂಥರ್ಸ್ ತಂಡ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯ ಹೊದವಾಡ ಹಾಗೂ ಟಿಕೆ ರ‍್ಯಾಂಬೊ ತಂಡಗಳ ನಡುವೆ ನಡೆದು ೨೦-೨೫, ೨೮-೨೬, ೨೦-೧೮ ಅಂಕಗಳೊAದಿಗೆ ಹೊದವಾಡ ತಂಡ ಫೈನಲ್ ಪ್ರವೇಶಿಸಿತು. ಹೊದವಾಡ ಹಾಗೂ ದೇವಸ್ತೂರು ಬ್ಲ್ಯಾಕ್ ಪ್ಯಾಂಥರ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ದೇವಸ್ತೂರು ಬ್ಲ್ಯಾಕ್ ಪ್ಯಾಂಥರ್ಸ್ ತಂಡ ೨೫-೨೭, ೨೫-೨೩ ಅಂಕಗಳೊAದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಹೊದವಾಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್‌ನಲ್ಲಿ ಮೊದಲ ಸ್ಥಾನ ಪಡೆದ ತಂಡಕ್ಕೆ ೨೫ ಸಾವಿರ ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ನಗದು, ಟ್ರೋಫಿ ನೀಡಲಾಯಿತು.
ವಾಲಿಬಾಲ್‌ನ ಫೈನಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೋಚನ ಲವಿನ್, ಕಟ್ಟೆಮನೆ ಮೀನಾ ರಾಮಚಂದ್ರ, ನಂದೇಟಿರ ಕೌಶಿ ಕುಶಾಲಪ್ಪ, ತಳೂರು ದುಜು, ಸ್ವಾಗತ್ ಕ್ಯಾಟರಿಂಗ್ ಮಾಲೀಕರಾದ ಬಿದ್ರುಪಣೆ ಗಣೇಶ್, ದಾನಿ ಜಗಪಾಪು ಸಣ್ಣಯ್ಯ, ಮರಗೋಡು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಕಾಂಗೀರ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಬ್ಲ್ಯಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಟ್ಟೆಮನೆ ಮಿಲನ ಆಗಿ ಹೊರಹೊಮ್ಮಿತು. ಹೊದವಾಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್‌ನಲ್ಲಿ ಮೊದಲ ಸ್ಥಾನ ಪಡೆದ ತಂಡಕ್ಕೆ ೨೫ ಸಾವಿರ ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ನಗದು, ಟ್ರೋಫಿ ನೀಡಲಾಯಿತು.
ವಾಲಿಬಾಲ್‌ನ ಫೈನಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೋಚನ ಲವಿನ್, ಕಟ್ಟೆಮನೆ ಮೀನಾ ರಾಮಚಂದ್ರ, ನಂದೇಟಿರ ಕೌಶಿ ಕುಶಾಲಪ್ಪ, ತಳೂರು ದುಜು, ಸ್ವಾಗತ್ ಕ್ಯಾಟರಿಂಗ್ ಮಾಲೀಕರಾದ ಬಿದ್ರುಪಣೆ ಗಣೇಶ್, ದಾನಿ ಜಗಪಾಪು ಸಣ್ಣಯ್ಯ, ಮರಗೋಡು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಕಾಂಗೀರ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಬ್ಲ್ಯಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಟ್ಟೆಮನೆ ಮಿಲನ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಚೇತ್ರದಲ್ಲಿನ ಸಾಧನೆಗಾಗಿ ಪಾಣತ್ತಲೆ ರಾಯ್ ಚಿಣ್ಣಪ್ಪ, ಎಂ.ಸಿ.ಮಿಲನ್ ಇವರುಗಳನ್ನು ಸನ್ಮಾಸಿ ಗೌರವಿಸಲಾಯಿತು.
ವಾಲಿಬಾಲ್‌ನಲ್ಲಿ ಬೆಸ್ಟ್ ಡಿಫೆಂಡರ್ ಆಗಿ ಹೊದವಾಡ ತಂಡದ ಸುಭಾಶ್, ಬೆಸ್ಟ್ ಅಟ್ಯಾಕರ್ ಆಗಿ ದೇವಸ್ತೂರು ಬ್ಲಾö್ಯಕ್ ಪ್ಯಾಂಥರ್ಸ್ ತಂಡದ ಎಯ್ಯ, ಬೆಸ್ಟ್ ಪಾಸರ್ ಆಗಿ ಬ್ಲಾö್ಯಕ್ ಪ್ಯಾಂಥರ್ಸ್ನ ಅದಿಲ್ ಬಹುಮಾನ ಸ್ವೀಕರಿಸಿದರು.
ಥ್ರೋಬಾಲ್‌ನಲ್ಲಿ ಬೆಸ್ಟ್ ಡಿಫೆಂಡರ್ ಆಗಿ ಕಾಂತೂರು ತಂಡದ ಆಶಿತಾ, ಬೆಸ್ಟ್ ಅಟ್ಯಾಕರ್ ಆಗಿ ಪಿಂಕ್ ಪ್ಯಾಂಥರ್ಸ್ ತಂಡದ ತಶ್ಮಿಯ ಬಹುಮಾನ ಪಡೆದರು.
ಬೆಳಿಗ್ಗೆ ಪಂದ್ಯಾಟದ ಸಮಾರಂಭವನ್ನು ಮರಗೋಡು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಕೆದಂಬಾಡಿ ಶೈಲಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹೆಣ್ಣು ಸಮಾಜದ ಕಣ್ಣು ಎಂದು ಬಣ್ಣಿಸಿದರು. ಮಹಿಳೆಯರೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಲ್ಯಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಟ್ಟೆಮನೆ ಮಿಲನ ವಹಿಸಿದ್ದರು. ಬ್ಲ್ಯಾಕ್ ಪ್ಯಾಂಥರ್ಸ್ ಕ್ಲಬ್ ನ ಕ್ರೀಡಾ ಅಧ್ಯಕ್ಷೆ ಬಿದ್ರುಪಣೆ ಚಂದ್ರಕಲಾ, ಉಪಾಧ್ಯಕ್ಷೆ ಕಟ್ಟೆಮನೆ ಮೋನಿಕಾ ಮತ್ತಿತರರು ಉಪಸ್ಥಿತರಿದ್ದರು.
ವಾಲಿಬಾಲ್‌ನ ಮೊದಲ ಪಂದ್ಯವನ್ನು ಕಾಫಿ ಬೆಳೆಗಾರರಾದ ಕಟ್ಟೆಮನೆ ಸೋನಾಜಿತ್, ಚೆರಿಯಮನೆ ತಾರಾದೇವಿ ಉದ್ಘಾಟಿಸಿದರು. ಥ್ರೋಬಾಲ್‌ನ ಮೊದಲ ಪಂದ್ಯವನ್ನು ಕಾಫಿ ಬೆಳೆಗಾರರಾದ ಕಟ್ಟೆಮನೆ ರೋಹಿಣಿ ಉದ್ಘಾಟಿಸಿದರು.
- ಉಜ್ವಲ್ ರಂಜಿತ್.