ಮಡಿಕೇರಿ, ಏ. ೧೦ : ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರನ್ನು ಭೇಟಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿಯೋಗ ಸರ್ಕಾರಿ ದಾಖಲೆಗಳಲ್ಲಿ “ಕೊಡವ” ಎಂಬ ಶಾಸ್ತಿçÃಯ ಪದ ಬಳಕೆಯ ಕುರಿತು ಚರ್ಚಿಸಿತು.
ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮತ್ತಿತರರು ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ “ಕೊಡವ” ಪದ ಬಳಕೆಗೆ ಕ್ರಮ ಕೈಗೊಳ್ಳದಿರುವುದನ್ನು ಮತ್ತೊಮ್ಮೆ ಕಾನೂನಿನ ಮೂಲಕ ಪ್ರಶ್ನಿಸುವುದಾಗಿ ತಿಳಿಸಿದರು.
ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗೆಜೆಟ್ ಅಧಿಸೂಚನೆಯ ಮೂಲಕ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಕೊಡವ ಎಂಬ ಶಾಸ್ತಿçÃಯ ಪದವನ್ನು ಅಳವಡಿಸುವ ಕುರಿತು ಚರ್ಚಿಸಲಾಗಿದೆ. ೨೦೨೧ ಡಿ.೮ ರಂದು, ಡಾ.ದ್ವಾರಕನಾಥ್ ಆಯೋಗದ ವರದಿ ಕೂಡ ಇದನ್ನು ಶಿಫಾರಸು ಮಾಡಿದೆ.
ಹೈಕೋರ್ಟ್ ತೀರ್ಪು ನೀಡಿ ಈಗಾಗಲೇ ೧೬ ತಿಂಗಳು ಕಳೆದಿದೆ. ಆದರೆ ಆದೇಶವನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸುತ್ತಿಲ್ಲ. ಈಗಾಗಲೇ ಕರ್ನಾಟಕ ಹೈಕೋರ್ಟ್ನಲ್ಲಿ ಸಂಬAಧಪಟ್ಟವರ ವಿರುದ್ಧ ನಾವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ ಎಂದು ನಾಚಪ್ಪ ಹೇಳಿದರು. ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕಲಿಯಂಡ ಮೀನಾ ಪ್ರಕಾಶ್ ಮತ್ತಿತರರು ನಿಯೋಗದಲ್ಲಿದ್ದರು.