ಮಡಿಕೇರಿ, ಏ. ೯: ಕ್ರೆöÊಸ್ತ ಬಾಂಧವರ ಪ್ರಮುಖ ಆಚರಣೆಗಳಲ್ಲಿ ಒಂದಾದ ಈಸ್ಟರ್ ಅನ್ನು ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈಸ್ಟರ್ ಹಬ್ಬ ಯೇಸು ಕ್ರಿಸ್ತರ ಮರಣದ ಮೂರನೇಯ ದಿನದಂದು ಪುನರುತ್ಥಾನದ ಸ್ಮರಣೆ ಎಂದು ಆಚರಿಸಲಾಗುತ್ತದೆ.
ಹಬ್ಬದ ಪ್ರಯುಕ್ತ ಮಡಿಕೇರಿಯ ಸಂತ ಮೈಕಲರ ದೇವಾಲಯದಲ್ಲಿ ಶನಿವಾರ ರಾತ್ರಿ ಹೊಸ ಬೆಂಕಿಯನ್ನು ಹಚ್ಚಿ ಭಕ್ತಾದಿಗಳು ತಂದ ಮೇಣದ ಬತ್ತಿಯನ್ನು ಹಚ್ಚಿ ದೇವಾಲಯವನ್ನು ಪ್ರವೇಶಿಸಿ ನಂತರ ಬಲಿಪೂಜೆ ನಡೆಸಿ ನೀರನ್ನು ಪೂಜಿಸಿ ಭಕ್ತಾದಿಗಳಿಗೆ ನೀಡಲಾಯಿತು.
ಯೇಸು ಪುನರುತ್ಥಾನರಾಗುವ ಗುಹೆಯನ್ನು ಚರ್ಚ್ನಲ್ಲಿ ಸೃಷ್ಟಿಸಲಾಗಿತ್ತು. ಬಲಿಪೂಜೆಯನ್ನು ಧರ್ಮಗುರು ದೀಪಕ್ ಮತ್ತು ನವೀನ್ ನೆರವೇರಿಸಿದರು.ನಾಪೋಕ್ಲು: ಇಲ್ಲಿನ ಮೇರಿಮಾತೆ ದೇವಾಲಯದಲ್ಲಿ ಶುಭ ಶುಕ್ರವಾರ ದಿನದ ಅಂಗವಾಗಿ ಸ್ಥಳೀಯ ಕ್ರೈಸ್ತ ಬಾಂಧವರು ವಿಶೇಷ ಬಲಿ ಪೂಜೆ, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಗುಡ್‌ಫ್ರೆöÊಡೆ ಆಚರಿಸಿದರು. ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ಅವರು ಸಾಂಕೇತಿಕವಾಗಿ ೧೨ ಮಂದಿ ಶಿಷ್ಯರ ಕಾಲುಗಳನ್ನು ತೊಳೆದು ರೊಟ್ಟಿ ಮತ್ತು ದ್ರಾಕ್ಷಿಯನ್ನು ನೀಡಿ ಗೌರವಿಸಿ ಬಲಿ ಪೂಜೆ ಮತ್ತು ದಿನದ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.ಸುಂಟಿಕೊಪ್ಪ : ನಾಡಿನದ್ಯಂತ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಖಕಾಲದ (ಈಸ್ಟರ್) ಹಬ್ಬವನ್ನು ಸುಂಟಿಕೊಪ್ಪ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ವಿವಿಧ ಸಾಂಘ್ಯಗಳ ಮೂಲಕ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂತ ಮೇರಿ ಸಭಾಂಗಣದಲ್ಲಿ ಶನಿವಾರ ಮಧ್ಯರಾತ್ರಿ ೧೦ ಗಂಟೆಗೆ ಮೈಸೂರು ಧರ್ಮಕ್ಷೇತ್ರದ ಕೋಶಾಧಿಕಾರಿ ರೇ. ಫಾ. ಜೇಮ್ಸ್ ಡೊಮಿನಿಕ್ ಸಂತ ದೇವಾಲಯದ ಧರ್ಮಗುರುಗಳಾದ ಪಾಧರ್ ಅರುಳ್ ಸೆಲ್ವಕುಮಾರ್ ಅವರು ಆಚರಣೆಯ ವಿಧಿವಿಧಾನ ನೆರವೇರಿಸಿದರು. ನಂತರ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆ ನಡೆಯಿತು.
ಉಪಯಾಜಕರಾದ ಚಾರ್ಲ್ಸ್ ಸಂತ ಕ್ಲಾರ ಕನ್ಯಾಸ್ತಿçà ಕಾನ್ವೆಂಟಿನÀÀ ಕನ್ಯಾಸ್ತಿçÃಯರು, ಗಾಯನ ವೃಂದದೊAದಿಗೆ ನೂರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಾದಿಗಳು ದೇವಾಲಯದಲ್ಲಿ ಪುನರುತ್ಥಾನದ ಆಡಂಬರ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ನಂತರ ಪ್ರಭು ಯೇಸು ಕ್ರಿಸ್ತರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದಲ್ಲಿ ಸಂಭ್ರಮಿಸಿದರು.