ಸೋಮವಾರಪೇಟೆ, ಏ. ೧೦: ತಾಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಕರೆಯಲ್ಪಡುವ ನಗರಳ್ಳಿ ಸುಗ್ಗಿ ಉತ್ಸವದ ಪ್ರಯುಕ್ತ ಸುಗ್ಗಿ ಆಚರಣೆಯ ವಿಧಿವಿಧಾನದಂತೆ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಶನಿವಾರ ದೀಪಗಳನ್ನು ತಂದು ಪೂಜಿಸಿದರು.

ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮದ ಮನೆಯಿಂದ ಗ್ರಾಮಸ್ಥರು ದೀಪಗಳನ್ನು ಇಟ್ಟು ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ನಂತರ ದೇವರಕಟ್ಟೆಗೆ ಗ್ರಾಮಸ್ಥರು ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಈ ಸಂದರ್ಭ ಕೂತಿ ಗ್ರಾಮದ ಅಧ್ಯಕ್ಷ ಹೆಚ್.ಡಿ. ಮೋಹನ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗ್ರಾಮದ ಪಟೇಲ ಬಸವರಾಜ್, ಕೆ.ಟಿ. ಪರಮೇಶ್, ಗಣೇಶ್, ದಿನೇಶ್, ಗಿರೀಶ್, ಅರ್ಚಕ ಅನಂತರಾಮ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.