ಗೋಣಿಕೊಪ್ಪ ವರದಿ, ಏ. ೯: ಅತ್ತೂರು ಗ್ರಾಮದಲ್ಲಿ ವಾಸವಿರುವ ವಿನ್ಸಿ ಎಂಬವರ ಪತ್ನಿ ಅನಿತಾ (೩೨) ತಾ. ೫ ರಿಂದ ನಾಪತ್ತೆಯಾಗಿದ್ದಾರೆ. ೫ ಅಡಿ ಎತ್ತರವಿದ್ದು, ತಮಿಳು, ಮಲಯಾಳಿ, ಕನ್ನಡ ಮಾತನಾಡುತ್ತಾರೆ.

ತಾ. ೫ ರಂದು ಆಧಾರ್ ಕಾರ್ಡ್ ಮಾಡಿಸಲು ತೆರಳಿದವರು ಹಿಂತಿರುಗಿ ಬಂದಿಲ್ಲ ಎಂದು ಪತಿ ವಿನ್ಸಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ ೦೮೨೭೪ ೨೪೭೩೩೩ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.