(ಅಣ್ಣೀರ ಹರೀಶ್ ಮಾದಪ್ಪ)
ಶ್ರೀಮಂಗಲ, ಏ. ೯: ಬಾಚೀರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಹೆಗ್ಗಳ ಗ್ರಾಮದ ಅಚ್ಚಪಂಡ ತಂಡ ಚಾಂಪಿಯನ್ ಆಗಿ ರೂ. ೫೦ ಸಾವಿರ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬಿರುನಾಣಿಯ ಕಳಕಂಡ ತಂಡ ರನ್ನರ್ಸ್ ಪ್ರಶಸ್ತಿಯೊಂದಿಗೆ ರೂ. ೩೦ ಸಾವಿರ ನಗದು ಮತ್ತು ಟ್ರೋಫಿ ಪಡೆಯಿತು. ಅಮ್ಮತ್ತಿಯ ಪಂದ್ಯAಡ ಕುಟುಂಬ ತಂಡ ೩ನೇ ಸ್ಥಾನದೊಂದಿಗೆ ಟ್ರೋಫಿ ಹಾಗೂ ರೂ.೨೦ ಸಾವಿರ ನಗದು ಬಹುಮಾನ ಪಡೆಯಿತು.
ಪೊನ್ನಂಪೇಟೆ ತಾಲೂಕು ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ ೯ ದಿನಗಳಿಂದ ಆಯೋಜಿಸಲಾಗಿದ್ದ ಬಾಚೀರ ಕ್ರಿಕೆಟ್ ಕಪ್-೨೦೨೩ ಫೈನಲ್ ಪಂದ್ಯಾಟದ ಮೂಲಕ ೯ ದಿನದಿಂದ ನಡೆಯುತ್ತಿದ್ದ ಪಂದ್ಯಾಟಕ್ಕೆ ತೆರೆಬಿದ್ದಿತು.
ಫೈನಲ್ ಪಂದ್ಯಾಟ: ಟಾಸ್ ಗೆದ್ದ ಕಳಕಂಡ ತಂಡ ಬೌಲಿಂಗ್ ಆಯ್ದು ಕೊಂಡಿತು. ಅಚ್ಚಪಂಡ ತಂಡ ಮೊದಲು ಬ್ಯಾಟ್ ಮಾಡಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸಿತು.
ನಂತರ ಬ್ಯಾಟ್ ಮಾಡಿದ ಕಳಕಂಡ ತಂಡ ಆರಂಭದಿAದಲೇ ಒಂದರ ಹಿಂದೆ ಒಂದರAತೆ ವಿಕೆಟ್ ಪತನವಾಗತೊಡಗಿದ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿತು. ಅಚ್ಚಪಂಡ ತಂಡದ ಮಿಥುನ್ ಆರಂಭದಲ್ಲಿಯೇ ತನ್ನ ಓವರ್ನಲ್ಲಿ ೧ ರನ್ ನೀಡಿ ೪ ವಿಕೆಟ್ ಪಡೆಯುವ ಮೂಲಕ ಕಳಕಂಡ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಅಂತಿಮವಾಗಿ ೩೪ ರನ್ಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ಪರಿಣಾಮ ಅಚ್ಚಪಂಡ ತಂಡ ಗೆಲುವಿನ ನಗೆ ಬೀರಿತು. ಕಳಕಂಡ ಬಬ್ಳಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
೩ನೇ ಸ್ಥಾನಕ್ಕಾಗಿ ಪಂದ್ಯ: ಸೆಮಿ ಫೈನಲ್ನಲ್ಲಿ ಪರಾಜಿತ ಮಂಡುವAಡ ಮತ್ತು ಪಂದ್ಯAಡ ತಂಡದ ನಡುವೆ ನಡೆಯಿತು. ಮಂಡುವAಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪAದ್ಯAಡ (೪೧/೩) ರನ್ ಗಳಿಸಿತು. ಮಂಡುವAಡ (೩೬/೬) ಗಳಿಸಲಷ್ಟೇ ಸಾಧ್ಯವಾಗಿ ೫ ವಿಕೆಟ್ನಿಂದ ಸೋಲು ಅನುಭವಿಸಿತು. ಈ ಮೂಲಕ ಪಂದ್ಯAಡ ಕುಟುಂಬ ೩ನೇ ಸ್ಥಾನ ಪಡೆದು ಟ್ರೋಫಿ ಹಾಗೂ ರೂ.೨೦ ಸಾವಿರ ನಗದು ಪಡೆಯಿತು. ಮಂಡುವAಡ ದೀಕ್ಷಿತ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮಹಿಳಾ ಪ್ರದರ್ಶನ ಪಂದ್ಯ
ಟಿ. ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಮತ್ತು ಚೆಟ್ಟಳ್ಳಿಯ ಜೋಮಾಲೆ ಮಹಿಳಾ ತಂಡ ನಡುವೆ ಕ್ರಿಕೆಟ್ ನಡೆಯಿತು.
ಮೊದಲು ಬ್ಯಾಟ್ ಮಾಡಿದ ಸಂಭ್ರಮ ತಂಡ ೩೭/೨ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಜೋಮಾಲೆ ತಂಡ ೩೮/೩ ರನ್ ಗಳಿಸಿ ೭ ವಿಕೆಟ್ ನಿಂದ ಗೆಲುವು ಸಾಧಿಸಿತು.
ಜೋಮಾಲೆ ತಂಡ ಪ್ರಥಮ ಸ್ಥಾನ, ಸಂಭ್ರಮ ದ್ವಿತೀಯ ಸ್ಥಾನ ಮತ್ತು ಶ್ರೀಮಂಗಲ ಕೊಡವ ಸಮಾಜ ಮಹಿಳಾ ತಂಡ ತೃತೀಯ ಸ್ಥಾನ ಪಡೆಯಿತು.
ಪಂದ್ಯಾವಳಿಯ ಬೆಸ್ಟ್: ಮ್ಯಾನ್ ಆಫ್ ದಿ ಸಿರೀಸ್ ಆಗಿ ಅಚ್ಚಪಂಡ ಅಯ್ಯಪ್ಪ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಗಿ ಪಂದ್ಯAಡ ತಮ್ಮಯ್ಯ, ಬೆಸ್ಟ್ ಬೌಲರ್ ಆಗಿ ಮಂಡುವAಡ ಹರ್ಷಿತ್, ಬೆಸ್ಟ್ ಫೀಲ್ಡರ್ ಅಚ್ಚಪಂಡ ಮಿಥುನ್, ಬೆಸ್ಟ್ ಟೀಮ್ ಪಂದ್ಯAಡ ಕುಟುಂಬ ತಂಡ ಪ್ರಶಸ್ತಿ ಪಡೆಯಿತು.
ಮೆರಗು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ: ತಿಂಗಕೊರ್ ಮೊಟ್ಟ್ ತಲಕಾವೇರಿ ತಂಡ, ಸ್ಥಳೀಯ ಬಾಲಕಿಯರ ತಂಡದಿAದ ನೃತ್ಯ ಕ್ರಿಕೆಟ್ ಹಬ್ಬದಲ್ಲಿ ಮೆರಗು ನೀಡಿತು.
ಅತಿಥಿಗಳಿಗೆ ವಿಶೇಷ ಸ್ವಾಗತ: ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಅಂತರರಾಷ್ಟಿçÃಯ ಮಾಜಿ ಅಥ್ಲೀಟ್, ಏಕಲವ್ಯ ಪ್ರಶಸ್ತಿ ವಿಜೇತ ತೀತಮಾಡ ಅರ್ಜುನ್ ದೇವಯ್ಯ ಅವರನ್ನು ಕ್ರೀಡಾಂಗಣದ ಮುಖ್ಯದ್ವಾರ ದಿಂದ ಆತಿಥೇಯ ಬಾಚೀರ ಕುಟುಂಬಸ್ಥರು ಸಾಂಪ್ರದಾಯಿಕ ಉಡುಪಿನಲ್ಲಿ, ಒಡ್ಡೋಲಗದೊಂದಿಗೆ ವೇದಿಕೆಗೆ ಮೆರವಣಿಗೆ ಮೂಲಕ ಕರೆ ತಂದು ಗೌರವ ನೀಡಿತು.
ಸಮಾರೋಪ ಸಮಾರಂಭ: ಸಂಜೆ ನಡೆದ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಅರ್ಜುನ್ ದೇವಯ್ಯ ಮುಖ್ಯ ಅತಿಥಿಯಾಗಿ
(ಮೊದಲ ಪುಟದಿಂದ) ಪಾಲ್ಗೊಂಡು ಮಾತನಾಡಿ, ಇಂತಹ ಕ್ರೀಡಾಕೂಟ ಕುಟುಂಬದಲ್ಲಿ ಮತ್ತು ಜನಾಂಗದಲ್ಲಿ ಆತ್ಮೀಯತೆ ಹಾಗೂ ಬಾಂಧವ್ಯತೆಯನ್ನು ಮೂಡಿಸುತ್ತದೆ ಎಂದÀರು.
ವೇದಿಕೆಯಲ್ಲಿ ಬಾಚೀರ ಕುಟುಂಬದ ಪಟ್ಟೆದಾರ ಗಪ್ಪು ನಾಣಯ್ಯ, ಕುಟುಂಬದ ಅಧ್ಯಕ್ಷ ಸುಜಾ ಉತ್ತಯ್ಯ, ಪಂದ್ಯಾವಳಿಯ ಅಧ್ಯಕ್ಷ ಕಾಶಿ ಕಾರ್ಯಪ್ಪ, ಪಂದ್ಯಾವಳಿ ಕಾರ್ಯದರ್ಶಿ ವಾಸು ದೇವಯ್ಯ, ಪಂದ್ಯಾವಳಿಯ ಸಂಚಾಲಕ ರಾಜ ಉತ್ತಪ್ಪ ಹಾಜರಿದ್ದರು. ಬಾಚೀರ ಅದ್ಮಿಕಾ ಕುಶಾಲಪ್ಪ ಪ್ರಾರ್ಥಿಸಿ, ಶಿವಿಕಾ ಕುಶಾಲಪ್ಪ ಸ್ವಾಗತಿಸಿದರು. ಕಾಶಿ ಕಾರ್ಯಪ್ಪ ವಂದಿಸಿದರು, ಕರ್ನಂಡ ಚಲನ್ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿನಿ ಬಾಚೀರ ಭೂಮಿಕಾ ಉತ್ತಯ್ಯ ಅವರು ಬಾಚೀರ ಕುಟುಂಬದ ಪರ ಜನಾಂಗದ ರಕ್ಷಣೆಯ ಸಂದೇಶ ಓದಿದರು. ಕೊಡವ ಜನಾಂಗದ ಅಸ್ತಿತ್ವ ಸೂರ್ಯ ಚಂದ್ರ ಇರುವವರೆಗೆ ಉಳಿಯಲು ಜಮ್ಮ ಭೂಮಿಯನ್ನು ಮಾರಾಟ ಮಾಡದೇ ಉಳಿಸಿಕೊಳ್ಳಬೇಕು. ಕೊಡವ ಜನಾಂಗದ ವಿಶೇಷ ಕೋವಿ ಹಕ್ಕನ್ನು ಉಳಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ನೆಲೆಸಿರುವ ಕೃಷಿಯಲ್ಲಿ ತೊಡಗಿಕೊಂಡಿರುವ ಯುವಕರನ್ನು ಮದುವೆಯಾಗಲು ನಿರಾಸಕ್ತಿಯನ್ನು ವಿದ್ಯಾವಂತ ಯುವತಿಯರು ತಾಳದೇ ಸಕಾಲದಲ್ಲಿ ಮದುವೆಯಾಗುವ ಮೂಲಕ ಜನಾಂಗದ ಉಳಿವಿನ ನಿಟ್ಟಿನಲ್ಲಿ ನಿರ್ಧರಿಸಬೇಕು ಎಂದು ಮನವಿ ಮಾಡಿದರು.