ಭಾಗಮಂಡಲ, ಏ. ೯: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಕುದುಕುಳಿ ಐನ್ ಮನೆ ಕ್ರಿಕೆಟ್ ಕಪ್ ೨೦೨೩ಯಲ್ಲಿ ಭಾನುವಾರ ಬಿದ್ರುಪಣೆ ಮತ್ತು ಕುಂಬAಡ ತಂಡಗಳ ನಡುವೆ ಪಂದ್ಯಾಟ ನಡೆಯಿತು. ಕುಂಬAಡ ತಂಡ ಆರು ಓವರ್‌ನಲ್ಲಿ ೫೯ ರನ್ ಗಳಿಸಿದರೆ ಬಿದ್ರುಪಣೆ ತಂಡ ಏಳು ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿ ಒಂದು ರನ್ ಸೋಲನ್ನು ಅನುಭವಿಸಿತು.

ತೆಕ್ಕಡೆ ತಂಡದ ವಿರುದ್ಧ ಯಾಪಾರೆ ತಂಡ ೩೦ ರನ್ ಗಳಿಸಿ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ಕೋಟೆರ ಮತ್ತು ಕುಂಬAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಟೆರ ತಂಡ ವಿಜಯಿಯಾಯಿತು. ತೆಕ್ಕಡೆ ಮತ್ತು ಪುದಿನೆರವನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುದಿನೆರವನ ತಂಡ ೭೯ ರನ್ ಗಳಿಸಿದರೆ ತೆಕ್ಕಡೆ ೬೦ ರನ್ ಸಾಧಿಸಿ ೧೯ ರನ್‌ಗಳ ಸೋಲನ್ನು ಅನುಭವಿಸಿತು. ಕೋಟೆರ ಮತ್ತು ಪುದಿನೆರವನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಟೆರ ತಂಡ ೪೦ ರನ್ ಗಳಿಸಿತು. ಪುದಿ ಪುದಿನೆರವನ ಎರಡು ವಿಕೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು. ತಾ. ೧೦ ರಂದು (ಇಂದು) ಯಾವುದೇ ಪಂದ್ಯಾಟ ಇರುವುದಿಲ್ಲ.