(ಕಾಯಪAಡ ಶಶಿ ಸೋಮಯ್ಯ)
ಮಡಿಕೇರಿ, ಏ. ೮: ೨೦೧೮ರ ನಂತರದಲ್ಲಿ ನಾಲ್ಕು ವರ್ಷಗಳ ಕಾಲ ಕಾರಣಾಂತರಗಳಿAದ ಸ್ಥಗಿತಗೊಂಡು ಈ ವರ್ಷ ಮತ್ತೆ ಮರು ಚಾಲನೆಗೊಂಡ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ತಾ. ೯ ರಂದು (ಇಂದು) ಸಂಭ್ರಮದ ತೆರೆ ಬೀಳಲಿದೆ.
೨೩ನೆಯ ವರ್ಷದ ಹಾಕಿ ನಮ್ಮೆಯನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ಆಯೋಜಿಸಿದ್ದು, ಮಾರ್ಚ್ ೧೮ ರಿಂದ ೨೩ ದಿನಗಳ ಕಾಲ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆದಿದೆ. ಅಪ್ಪಚೆಟ್ಟೋಳಂಡ ಕಪ್ನ ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭ ತಾ. ೯ ರಂದು (ಇಂದು) ನಡೆಯಲಿದ್ದು, ಹಾಕಿ ವೈಭವಕ್ಕೆ ನಾಪೋಕ್ಲು ಸಜ್ಜಾಗಿದೆ.
ಪ್ರತಿಷ್ಠಿತ ಚಾಂಪಿಯನ್ ಪಟ್ಟಕ್ಕೆ ನಾಲ್ಕುನಾಡು ವಿಭಾಗದವರಾದ ಕುಲ್ಲೇಟಿರ ಹಾಗೂ ದಕ್ಷಿಣ ಕೊಡಗಿನ ಗೋಣಿಕೊಪ್ಪ ಕೈಕೇರಿಯ ಕುಪ್ಪಂಡ ಕುಟುಂಬದ ನಡುವೆ ಸೆಣಸಾಟ ನಡೆಯಲಿದೆ. ೨೩ ವರ್ಷದ ಹಾಕಿ ಉತ್ಸವದಲ್ಲಿ ಕುಲ್ಲೇಟಿರ ಕುಟುಂಬ ಆರಂಭಿಕವಾಗಿ ಮೂರು ಬಾರಿ ಚಾಂಪಿಯನ್ ಆಗಿತ್ತಾದರೂ, ನಂತರದಲ್ಲಿ ಮತ್ತೆ ಫೈನಲ್ ತಲುಪಿರಲಿಲ್ಲ. ಇದೀಗ ೧೬ ವರ್ಷಗಳ ಅಂತರದ ಬಳಿಕ ಕುಲ್ಲೇಟಿರ ಫೈನಲ್ ತಲುಪಿದ್ದರೆ ಎದುರಾಳಿಯಾಗಿ ಕೈಕೇರಿ ಕುಪ್ಪಂಡ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನಲ್ಲಿದೆ.
ಇತ್ತಂಡಗಳು ಬಲಿಷ್ಠವಾಗಿದ್ದು, ರೋಚಕ ಪಂದ್ಯವೊAದರ ಕಾತರದಲ್ಲಿ ಹಾಕಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂತಿಮ ಹಣಾಹಣಿಯ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಹಾಕಿ ಪ್ರೇಮಿಗಳು ಅಬಾಲವೃದ್ಧರಾಗಿ ಆಗಮಿಸುವ ಸಾಧ್ಯತೆಯಿದೆ.
ತಾ. ೯ರ ದಿನವಿಡೀ ನಾಪೋಕ್ಲುವಿನಲ್ಲಿ ಹಬ್ಬದ ಸಡಗರ ಮೂಡಿ ಬರಲಿದೆ. ಮೂರು ಹಾಗೂ ನಾಲ್ಕನೆಯ ಸ್ಥಾನಕ್ಕಾಗಿಯೂ ನೆಲ್ಲಮಕ್ಕಡ ಹಾಗೂ ಪಳಂಗAಡ ಕುಟುಂಬದ ನಡುವೆ ಹಣಾಹಣಿ ನಡೆಯಲಿದೆ. ಎರಡು ಪಂದ್ಯಗಳು, ಸಮಾರೋಪ ಸಮಾರಂಭ, ಸಾಂಸ್ಕೃತಿಕ ವೈವಿಧ್ಯ ಮತ್ತಿತರ ಕಾರ್ಯಕ್ರಮಗಳೊಂದಿಗೆ ೨೩ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವಕ್ಕೆ ಸಂಭ್ರಮದ
(ಮೊದಲ ಪುಟದಿಂದ) ತೆರೆ ಬೀಳಲಿದ್ದು, ಇದಕ್ಕಾಗಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಪಾರ ಸಂಖ್ಯೆಯ ಪ್ರೇಕ್ಷಕರೊಂದಿಗೆ ನಾಪೋಕ್ಲುವಿನಲ್ಲಿ ವಾಹನ ದಟ್ಟಣೆಯೂ ಅಧಿಕವಾಗಲಿದೆ. ಜನರಲ್ ತಿಮ್ಮಯ್ಯ ಮುಖ್ಯ ಕ್ರೀಡಾಂಗಣದ ಎದುರುಭಾಗದ ವಿಶಾಲ ಪ್ರದೇಶ ಸೇರಿದಂತೆ ಒತ್ತಿನಲ್ಲಿರುವ ಇತರ ಎರಡು ಮೈದಾನಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುವುದು. ಇದರೊಂದಿಗೆ ಕರ್ನಲ್ ಕಂಗಾAಡ ಮುತ್ತಪ್ಪ ಅವರ ಎರಡು ಎಕರೆ ಜಾಗವನ್ನೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಗ್ಯಾಲರಿ, ವಿಐಪಿ ಗ್ಯಾಲರಿಯೊಂದಿಗೆ ಪ್ರೇಕ್ಷಕರು ಹೆಚ್ಚಾದಲ್ಲಿ ಮ್ಯಾಟ್ ಹಾಕಿ ಜನರಿಗೆ ಅವಕಾಶ ಮಾಡಿಕೊಡುವ ಚಿಂತನೆ ಮಾಡಲಾಗಿದೆ ಎಂದು ಪ್ರಮುಖರಾದ ಮನು ಮುತ್ತಪ್ಪ ತಿಳಿಸಿದ್ದಾರೆ.
ವ್ಯವಸ್ಥಿತವಾಗಿ ಉತ್ಸವವನ್ನು ಯಶಸ್ವಿಗೊಳಿಸಲು ಜನತೆಯ ಸಹಕಾರವನ್ನೂ ಆಯೋಜಕರು ಬಯಸಿದ್ದಾರೆ. ಇಂದು ದಿನವಿಡೀ ಸಿದ್ಧತೆಯಲ್ಲಿ ಕುಟುಂಬಸ್ಥರು ತೊಡಗಿದ್ದರು. ಕಳೆದ ೨೩ ದಿವಸಗಳಿಂದ ನಾಪೋಕ್ಲುವಿನಲ್ಲಿ ಹಾಕಿ ಕಲರವ ಕಂಡುಬAದಿದ್ದು, ಭಾನುವಾರ ಈ ಬಾರಿಯ ಸಂಭ್ರಮಕ್ಕೆ ತೆರೆ ಬೀಳಲಿದೆ. ಮುಂದಿನ ವರ್ಷ ಕುಂಡ್ಯೋಳAಡ ಕಪ್ ಕೂಡ ಇಲ್ಲಿಯೇ ನಡೆಯಲಿದ್ದು, ಸತತ ನಾಲ್ಕು ಉತ್ಸವಕ್ಕೆ ನಾಪೋಕ್ಲು ಸಾಕ್ಷಿಯಾಗಲಿದೆ.