ಮಡಿಕೇರಿ, ಏ. ೧೦: ಇಲ್ಲಿನ ಗಣಪತಿಬೀದಿಯ ಜಾಮೀಯ ಮಸೀದಿಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ವಿಚಾರ ಇದೀಗ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಹಿನ್ನೆಲೆ ವಕ್ಫ್ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಜಾಗವನ್ನು ಮಸೀದಿ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

೪ ಸೆಂಟ್ ಜಾಗದ ಪೈಕಿ ಕೆಲ ಪ್ರದೇಶವನ್ನು ಇಬ್ಬರು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಾಮೀಯ ಮಸೀದಿಯ ವಕ್ಫ್ ಟ್ರಿಬ್ಯೂನಲ್ ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಗ ಮಸೀದಿಗೆ ಸೇರಿದೆ ಎಂದು ಆದೇಶಿಸಿದ ಹಿನ್ನೆಲೆ ಜಾಗವನ್ನು ವಕ್ಫ್ ಅಧಿಕಾರಿಗಳ ಸಮ್ಮುಖದಲ್ಲಿ ಮರುಹಸ್ತಾಂತರಿಸಲಾಯಿತು.

ಈ ಸಂದರ್ಭ ವಕ್ಫ್ ಅಧಿಕಾರಿ ಮಹಮ್ಮದ್ ಇರ್ಫಾನ್, ಮಸೀದಿಯ ಅಧ್ಯಕ್ಷ ಮೆಹಬೂಬ್ ಪಾಷಾ, ಕಾರ್ಯದರ್ಶಿ ನೂರುಲ್ಲಾದ್, ಉಪಾಧ್ಯಕ್ಷ ಸೈಯ್ಯದ್ ಮನ್ಜಾರ್, ಫೈಝಲ್ ಮೊಹಮ್ಮದ್ ಖಾನ್ ಹಾಜರಿದ್ದರು.