ಮಡಿಕೇರಿ, ಏ. ೧೦: ಸೌಜನ್ಯ ಸ್ವಸಹಾಯ ಸಂಘದ ೨೩ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಿಳಾ ದಿನಾಚರಣೆ ಎಫ್‌ಎಂಸಿ ಕಾಲೇಜು ಹಿಂಭಾಗದಲ್ಲಿರುವ ಅಂಗನವಾಡಿಯಲ್ಲಿ ನಡೆಯಿತು.

ಉದ್ಘಾಟನೆಯನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಬೇಬಿ ಪೂವಯ್ಯ ವಹಿಸಿದ್ದರು. ಅತಿಥಿಗಳಾಗಿ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅವಿನಾಶ್, ಓಡಿಪಿ ವಲಯಾಧಿಕಾರಿ ಜಾಯ್ಸ್ ಮೇನೆಜಸ್, ಸ್ಥಳೀಯರಾದ ಸಂಜು ಅಚ್ಚಯ್ಯ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾಧ, ದಿವ್ಯ ಪ್ರಾರ್ಥಿಸಿ, ಚಿಣ್ಣಮ್ಮ ಸ್ವಾಗತಿಸಿ, ಮೀನಕುಮಾರಿ ನಿರೂಪಿಸಿದರು.