ಕುಶಾಲನಗರ, ಏ. ೮ : ಕುಶಾಲನಗರ ಕೊಪ್ಪ ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಯುತ್ತಿದ್ದು, ಇದರಿಂದ ಕುಶಾಲನಗರ ಮೂಲಕ ಸಾಗುವ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯವಸ್ಥೆಗೆ ತೊಡಕುಂಟಾಗಿದೆ.

ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಕುಶಾಲನಗರ ಗಡಿಭಾಗದಲ್ಲಿ ಮತ್ತು ಕೆಲವೇ ದೂರದ ಅಂತರದಲ್ಲಿ ಮೈಸೂರು ತಂಡ ಕೊಪ್ಪ ಗಡಿ ಭಾಗದಲ್ಲಿ ದಿನದ ೨೪ ಗಂಟೆ ಕಾಲ ಪ್ರತಿವಾಹನಗಳನ್ನು ಪರಿಶೀಲನೆ ನಡೆಸುತ್ತಿದೆ.

ಈ ಸಂದರ್ಭ ವಾಹನಗಳ ಸಂಚಾರ ದಟ್ಟಣೆಯೊಂದಿಗೆ ನಿತ್ಯ ಸಾವಿರಾರು ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲು ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ

ಕಳೆದ ಶುಕ್ರವಾರದಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಕುಶಾಲನಗರದಿಂದ ಮೈಸೂರು ರಸ್ತೆಯ ಬೈಲುಕುಪ್ಪೆ ತನಕ ಸಂಚಾರ ದಟ್ಟಣೆ ಹೆಚ್ಚಾಗಿ ತುರ್ತು ವಾಹನಗಳಿಗೆ ಕೂಡ ಓಡಾಡಲು ಅನಾನುಕೂಲ ಉಂಟಾಗುತ್ತಿದೆ.

ಈ ಬಗ್ಗೆ ವಾಹನ ಸವಾರರಿಂದ ಮತ್ತು ಸ್ಥಳೀಯರಿಂದ ದೂರುಗಳು ಬಂದಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ‘ಶಕ್ತಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕುಶಾಲನಗರ ಮತ್ತು ನೆರೆಯ ಕೊಪ್ಪ ನಡುವೆ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳ ಓಡಾಟ ಮತ್ತು ವ್ಯವಹಾರಕ್ಕೂ ವೃತ್ತಿರಿಕ್ತ ಪರಿಣಾಮ ಬೀರಿದೆ ಎಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತರಾಜ್ ತಿಳಿಸಿದ್ದಾರೆ.

ಕಳೆದ ಐದು ದಿನಗಳಿಂದ ಕೊಡಗು ಜಿಲ್ಲೆಯ ಕುಶಾಲನಗರ ಕಡೆಗೆ ಆಗಮಿಸುವ ವಾಹನಗಳಿಂದ ಸುಮಾರು ೨೦ ಲಕ್ಷಕ್ಕೂ ಅಧಿಕ ಹಣ ಪತ್ತೆ ಮಾಡಿದ್ದು ಹಣದ ವಾರಿಸುದಾರರು ದಾಖಲೆ ನೀಡಿದ ಕಾರಣ ವಾಪಸ್ಸು ನೀಡಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಕುಶಾಲನಗರ ಗಡಿಭಾಗದ ವಾಹನ ತಪಾಸಣಾ ಕೇಂದ್ರದಲ್ಲಿ ನಿಯಮಾನುಸಾರ ದಿನದ ೨೪ ಗಂಟೆ ೩ ಪಾಳಿಗಳಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಇಲ್ಲಿನ ಅರಣ್ಯ ತಪಾಸಣಾ ಕೇಂದ್ರದಲ್ಲಿ ವಾಹನಗಳ ತಪಾಸಣಾ ಕೇಂದ್ರ ನಿರ್ಮಾಣವಾಗಿದ್ದು ಇದು ಇಕ್ಕಟ್ಟು ಪ್ರದೇಶವಾದ ಕಾರಣ ವಾಹನ ಸಂಚಾರಕ್ಕೆ ತೀವ್ರ ತರಹದ ಕಿರಿಕಿರಿ ಉಂಟಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ ಅವರು ವಾರಾಂತ್ಯದಲ್ಲಿ ಮೂರು ದಿನಗಳ ಕಾಲ ಸತತವಾಗಿ ರಜೆಗಳು ಇರುವ ಕಾರಣ ವಾಹನಗಳ ಸಂಚಾರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹೆದ್ದಾರಿಯಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಗೆ ತೊಡಕುಂಟಾಗ ದಂತೆ ಕ್ರಮ ಕೈಗೊಳ್ಳಲು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ನಾಗರಿಕರು ವಾಹನ ಸವಾರರು ಸಹಕರಿಸುವಂತೆ ಅವರು ಕೋರಿದ್ದಾರೆ. - ಚಂದ್ರಮೋಹನ್