ಮಡಿಕೇರಿ, ಏ. ೮: ನಗರದ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ತೆರೆ ಕಂಡಿತು. ನಿನ್ನೆ ಸಂಜೆ ಕಲಶ ಹಾಗೂ ತಾಲಪೊಲಿ ಮೆರವಣಿಗೆ ಬಳಿಕ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ಪ್ರಸಾದ ವಿತರಣೆ, ರಾತ್ರಿ ಶ್ರೀ ಪೋದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗಪಾಟ್, ಸಂಧ್ಯಾವೇಲೆ, ಕುಟ್ಟಿಚಾತನ್ ದೇವರ ತೆರೆ, ಇಂದು ಮುಂಜಾನೆ ಮುತ್ತಪ್ಪ, ತಿರುವಪ್ಪ ದೇವರ ತೆರೆ, ವಿಷ್ಣುಮೂರ್ತಿ ದೇವರ ಮೇಲೇರಿ, ಬೆಳಿಗ್ಗೆ ಪೋದಿ ತೆರೆ, ವಿಷ್ಣುಮೂರ್ತಿ ದೇವರ ಬಾರಣಿ ಬಳಿಕ ಧ್ವಜ ಅವರೋಹಣದೊಂದಿಗೆ ಮುತ್ತಪ್ಪ ಜಾತ್ರೋತ್ಸವ ತೆರೆ ಕಂಡಿತು.