ಸೋಮವಾರಪೇಟೆ, ಏ. ೮: ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಚಳಿಬಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತತೆಯಲ್ಲಿ, ಕರ್ತವ್ಯ ಲೋಪದ ಆರೋಪದ ಮೇರೆ ಇಲ್ಲಿನ ಠಾಣೆಯ ಎ.ಎಸ್.ಐ. ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತ್ತು ಮಾಡಲಾಗಿದೆ.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್, ಗುಪ್ತ ಕರ್ತವ್ಯ ಜವಾಬ್ದಾರಿ ಹೊತ್ತಿದ್ದ ನವೀನ್, ಮುಖ್ಯಪೇದೆ ಶಶಿಧರ್ ಸೇರಿದಂತೆ ಪೊಲೀಸ್ ಪೇದೆ ಕಾಶಿನಾಥ್ ಎಂಬವರುಗಳನ್ನು ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದು ಗಡಿಗಳಲ್ಲಿರುವ ಚನ್ನಾಪುರ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖಾಧಿಕಾರಿ ಗಳು ದಾಳಿ ನಡೆಸಿ, ಮಾಲುಗಳನ್ನು ವಶಕ್ಕೆ ಪಡೆದು ಆರೋಪಿಯ ಮೇಲೆ ಮೊಕದ್ದಮೆ ದಾಖಲಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
ಕಳೆದ ಐದು ದಿನಗಳ ಹಿಂದೆ ಚನ್ನಾಪುರ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಚನ್ನಾಪುರ ಬೀಟ್ ಪೊಲೀಸ್ ವ್ಯಾಪ್ತಿಗೆ ಒಳಪಡುವ ಎ.ಎಸ್.ಐ., ಗುಪ್ತ ಕರ್ತವ್ಯ ಪೇದೆ, ಮುಖ್ಯಪೇದೆ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲಾಗಿದೆ.
ಅಬಕಾರಿ ಅಕ್ರಮಗಳನ್ನು ತಡೆಗಟ್ಟಲೆಂದೇ ಪ್ರತ್ಯೇಕವಾಗಿ ಅಬಕಾರಿ ಇಲಾಖೆಯಿದೆ. ಆ ಇಲಾಖೆಯು ತನ್ನ ಕರ್ತವ್ಯ ನಿರ್ವಹಿಸಿದರೆ ಪೊಲೀಸ್ ಪೇದೆಗಳ ಮೇಲೆ ಅಮಾನತ್ತಿನಂತಹ ಕ್ರಮದ ಅವಶ್ಯಕತೆಯಿತ್ತೇ? ಎಂಬ ಮಾತುಗಳು ಇಲಾಖೆಯೊಳಗಿಂದ ಕೇಳಿಬರುತ್ತಿವೆ. ಎಷ್ಟೋ ಪ್ರಕರಣಗಳಲ್ಲಿ ಪೊಲೀಸರೇ ಅಬಕಾರಿ ಅಪರಾಧ ಗಳನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಒಂದು ಬಾರಿ ಎಚ್ಚರಿಕೆಯನ್ನಾದರೂ ನೀಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಅಕ್ರಮದಲ್ಲಿ ಪೊಲೀಸರು ಶಾಮೀಲಾಗಿದ್ದರೆ ಅಮಾನತ್ತು ಮಾಡಲೇಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅಮಾನತ್ತು ಗೊಳಿಸಿರುವುದು ಪೊಲೀಸರ ನೈತಿಕ ಸ್ಥೆöÊರ್ಯವನ್ನು ಕುಸಿಯುವಂತೆ ಮಾಡಿದೆ ಎಂಬ ಅನಿಸಿಕೆಗಳು ಕೇಳಿಬರುತ್ತಿವೆ.