ಮಡಿಕೇರಿ, ಏ. ೮: ಇಡೀ ಪ್ರಪಂಚವನ್ನೇ ಬಾಧಿಸಿ ಸಾವು-ನೋವಿಗೆ ಕಾರಣವಾದ ಕೊರೊನಾ ವೈರಸ್ ದೂರವಾಗಿದೆ ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೇ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ದೂಡಿದೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ವೈರಸ್ ಕಳೆದ ೪೦ ದಿನಗಳಲ್ಲಿ ೨೮ ಮಂದಿಯನ್ನು ಸೋಂಕಿದೆ.

ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ರಾಜ್ಯಗಳಿಗೆ ಕೋವಿಡ್ ಸೋಂಕು ವ್ಯಾಪಿಸುವ ಎಚ್ಚರಿಕೆ ನೀಡಿದ್ದು, ಮಾಸ್ಕ್ ಧರಿಸುವುದು ಸೇರಿದಂತೆ ಇನ್ನಿತರ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೊಡಗು ಕಡಿಮೆ ಸೋಂಕಿತರ ಪಟ್ಟಿಯಲ್ಲಿ ೨೮ನೇ ಸ್ಥಾನದಲ್ಲಿದೆ.

೨೮ ಪ್ರಕರಣಗಳು :ಕಳೆದ ೪೦ ದಿನಗಳಲ್ಲಿ ಒಟ್ಟು ೨೮ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಸೋಂಕಿತರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಗೆ ತುತ್ತಾಗಿಲ್ಲ. ಈ ಹಿನ್ನೆಲೆ ಸೋಂಕಿತರನ್ನು ಅವರವರ ಮನೆಗಳಲ್ಲಿ ಪ್ರತ್ಯೇಕತೆಯಲ್ಲಿಡಲಾಗಿದೆ. ಶೀತ, ಜ್ವರ, ಕೆಮ್ಮು ಇದ್ದವರನ್ನು ಪರೀಕ್ಷೆ ನಡೆಸಿದ ಸಂದರ್ಭ ಕೋವಿಡ್ ಪತ್ತೆಯಾಗಿದೆ.

ಸೋಂಕಿತರಿಗೆ ಅಗತ್ಯ ಔಷಧಿಗಳನ್ನು ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಗಂಭೀರ ಪರಿಸ್ಥಿತಿ ಉಂಟಾಗದAತೆ ಅಗತ್ಯ ಪೂರ್ವ ತಯಾರಿ ಕೈಗೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.