ಮಡಿಕೇರಿ, ಏ.೭ : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ೧೬ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ.೨೧ ಮತ್ತು ೨೨ ರಂದು ನಡೆಯಲಿದೆ.

ಕೇರಳದ ಪಯ್ಯನೂರ್‌ನ ಶ್ರೀ ಈಶ್ವರಿ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ತಾ.೨೧ ರಂದು ಸಂಜೆ ೬ ಗಂಟೆಗೆ ಆಚಾರ್ಯರ ಆಗಮನ, ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಏ.೨೨ ರಂದು ಬೆಳಿಗ್ಗೆ ೭ ಗಂಟೆಗೆ ಮಹಾ ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾ ಪೂಜೆ ನೆರವೇರಲಿದೆ.