ಕುಶಾಲನಗರ, ಏ. ೭: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಂಗ ಸಮಿತಿಯಾದ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುತ್ತಿರುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ದಕ್ಷಿಣ ಕನ್ನಡ ಖ್ಯಾತಿಯ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ಧೀಶಕ್ತಿ ಯಕ್ಷಗಾನ ಬಳಗದಿಂದ ಶ್ರೀರಾಮ ಪಟ್ಟಾಭಿಷೇಕ ಎಂಬ ಪೌರಾಣಿಕ ಪ್ರಸಂಗವನ್ನು ಸ್ವಾರಸ್ಯಕರವಾಗಿ ಮಂಡಿಸಲಾಯಿತು.ಸುಬ್ರಾಯ ಸಂಪಾಜೆಯವರ ಕಂಚಿನ ಕಂಠದ ಭಾಗವತಿಕೆಗೆ ಪದ್ಮಶ್ರೀ ತಂಡದ ಕಲಾವಿದರು ಪೂರಕವಾದ ಅರ್ಥ ವಿವರಣೆ ನೀಡಿದರು.