ಮಡಿಕೇರಿ, ಏ. ೬: ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಮತದಾರರ ಜಾಗೃತಿ ಸಮಿತಿ ಹಾಗೂ ಜಿಲ್ಲಾಡಳಿತವು ಮತದಾರ ಜಾಗೃತಿ ರಾಯಭಾರಿ ಗಳನ್ನಾಗಿ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹಾಗೂ ಜಿ.ಪಂ. ಸಿಇಓ, ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಸ್. ಆಕಾಶ್ ಅವರು ಮಾಹಿತಿ ನೀಡಿದರು.
ಮೇಕೇರಿಯ ವಿಶೇಷಚೇತನ ಮಹಿಳೆ ಎಸ್.ಕೆ. ಈಶ್ವರಿ, ಕುಶಾಲನಗರದ ಶಿಕ್ಷಕ ಬಸವರಾಜ ಬಡಿಗೇರ್, ಗೃಹರಕ್ಷಕ ದಳದ ಸಿಬ್ಬಂದಿ ರವಿ ಮುತ್ತಪ್ಪ ಅವರನ್ನು ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಎಸ್.ಕೆ. ಈಶ್ವರಿ ಬಾಲ್ಯದಲ್ಲಿಯೇ ವಿಶೇಷಚೇತನರಾಗಿದ್ದು, ಛಲಬಿಡದೇ ಹಂತಹAತವಾಗಿ ಸಾಧನೆಯ ಹಾದಿಯಲ್ಲಿ ಸಾಗಿ ೩೫ ರೀತಿಯ ಕರಕುಶಲ ಕಾರ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ದೈಹಿಕವಾಗಿ ಅದೆಷ್ಟೇ ಕಷ್ಟಗಳಿದ್ದರೂ ಅವನ್ನೆಲ್ಲ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಇವರು ತನ್ನ ಸಾಧನೆಗಳ ಮೂಲಕ ಸಮಾಜದಲ್ಲಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆ.
ಸ್ವAತ ಉದ್ಯೋಗವಾಗಿ ಹೊಲಿಗೆ, ಫಿನಾಯಿಲ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಕ್ರೀಡೆಯಲ್ಲಿಯೂ ಉತ್ಸಾಹಿಯಾಗಿರುವ ಇವರು ವೀಲ್ ಚೇರ್ ಓಟ, ಈಜು, ಜಾವಲಿನ್ ಎಸೆತ ಮೊದಲಾದ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ. ಓದು ಬರಹವನ್ನು ಮನೆಯಲ್ಲಿದ್ದುಕೊಂಡೆ ಕಲಿತ ಇವರು ಕಥೆ, ಕವನ ಬರೆಯುತ್ತಾರೆ. ನಾಟಕವನ್ನು ಕೂಡ ರಚನೆ ಮಾಡಿದ್ದು, ರಾಜ್ಯಮಟ್ಟದಲ್ಲಿ ಕಾವ್ಯರಚನೆಗಾಗಿ ಬಹುಮಾನ ಪಡೆದಿದ್ದಾರೆ.
ತರಕಾರಿ ಕೆತ್ತನೆ, ಹಾಡುಗಾರಿಕೆ, ಕಾವ್ಯ ವಾಚನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಈಶ್ವರಿ ಸಕ್ರಿಯರು. ಕಸದಿಂದ ರಸ, ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಸಂದೇಶ ಸಾರುವ ಕೃತಿಯನ್ನು ಕೂಡ ರೂಪಿಸಿದ್ದಾರೆ. ಕುವೆಂಪು ಕಾವ್ಯ ಪುರಸ್ಕಾರ, ಬಹುಮುಖ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ, ಸನ್ಮಾನಗಳೂ ಈಶ್ವರಿ ಅವರಿಗೆ ದೊರಕಿದೆ ಎಂದು ಅವರು ತಿಳಿಸಿದರು.
ಬಸವರಾಜ ಬಡಿಗೇರ್ ಅವರು ಮೂಲತಃ ಪಟ್ಟದಕಲ್ಲಿ ಗ್ರಾಮದವ ರಾಗಿದ್ದು, ಚಿತ್ರಕಲಾ ಶಿಕ್ಷಕರಾಗಿ ೧೬ ವರ್ಷಗಳಿಂದ ಕೊಡಗು ಜಿಲ್ಲೆಯ ೭ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
(ಮೊದಲ ಪುಟದಿಂದ) ಏಕವ್ಯಕ್ತಿ ಚಿತ್ರಕಲೆಗೆ ಹೆಸರಾಗಿರುವ ಬಸವರಾಜ ಬಡಿಗೇರ್ ಪಟ್ಟದಕಲ್ಲು ಉತ್ಸವ, ಬಾದಾಮಿ ಉತ್ಸವ ಸೇರಿದಂತೆ ರಾಜ್ಯದ ಅನೇಕ ಕಡೆ ತಮ್ಮ ಚಿತ್ರಕಲೆಗಳ ಪ್ರದರ್ಶನ ನೀಡಿದ್ದಾರೆ. ತಾಲೂಕು ಮಟ್ಟದ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ಸಹಪಠ್ಯ ಚಟುವಟಿಕೆಗಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಝೀ ಕನ್ನಡ ಟಿವಿ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸರಿಗಮ ಲಿಟಲ್ ಚಾಂಪ್ಸ್ನಲ್ಲಿ ಬಸವರಾಜ ಬಡಿಗೇರ ಅವರ ಪುತ್ರಿ ಪ್ರಗತಿ ಬಡಿಗೇರ್ ಜಯಗಳಿಸಿದ್ದರು. ಈ ಸಂದರ್ಭ ಬಸವರಾಜ ಬಡಿಗೇರ್ ಕೂಡ ರಿಯಾಲಿಟಿ ಶೋನಲ್ಲಿ ಹಾಡಿನ ಮೂಲಕ ಗಮನ ಸೆಳೆದಿದ್ದರು.
ಬಡಿಗೇರ್ ಅವರ ಪತ್ನಿ ಚಂದ್ರಕಲಾ ಬಡಿಗೇರ್ ಪುತ್ರಿಯರಾದ ಪ್ರಗತಿ ಬಡಿಗೇರ್, ಪ್ರತಿಕ್ಷಾ ಬಡಿಗೇರ್, ತ್ರಿವೇಣಿ ಬಡಿಗೇರ್ ಕೂಡ ಹಾಡುಗಾರರಾಗಿದ್ದು, ಗಾಯಕರ ಕುಟುಂಬ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಗೃಹರಕ್ಷಕ ದಳದಲ್ಲಿ ಕಳೆದ ೧೩ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ. ರವಿ ಮುತ್ತಪ್ಪ ಅವರು ಪ್ರಸ್ತುತ ಮಡಿಕೇರಿ ಕಾರಾಗೃಹದಲ್ಲಿ ಚಾಲಕರಾಗಿಯೂ ಕಾರ್ಯನಿರ್ವಹಿ ಸುತ್ತಿದ್ದಾರೆ.
ಸ್ವಾರ್ಥ ರಹಿತ ಸಮಾಜ ಸೇವೆ ಮಾಡುತ್ತಿರುವ ರವಿ ಮುತ್ತಪ್ಪ ಕೊಡಗು ಜಿಲ್ಲೆಯ ನದಿ, ಕೆರೆ, ತೊರೆಯಲ್ಲಿ ಯಾರೇ ಜಾರಿ ಬಿದ್ದು ಸಾವನ್ನಪ್ಪಿದ ಸಂದರ್ಭ ನೀರಿನಾಳದಿಂದ ಮೃತದೇಹಗಳನ್ನು ಮೇಲೆತ್ತುವಲ್ಲಿ ಇವರ ಸೇವೆ ಗಮನಾರ್ಹವಾಗಿದೆ. ೨೦ ವರ್ಷಗಳಲ್ಲಿ ಜಿಲ್ಲೆಯ ನದಿ, ತೊರೆಗಳಿಂದ ೩೯ ಮೃತ ಶರೀರಗಳನ್ನು ರವಿ ಮುತ್ತಪ್ಪ ಹೊರತೆಗೆದಿದ್ದಾರೆ.
ಕೊಡಗು ಜಿಲ್ಲೆಯ ಅಬ್ಬಿಫಾಲ್ಸ್, ಆವಂಡಿ ಜಲಪಾತ, ತಾಳತ್ತಮನೆ, ನಾಂಗಾಲ, ಶ್ರೀಮಂಗಲ, ಚೇಲಾವರ ಫಾಲ್ಸ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭವಿಸಿದ ಜಲದುರಂತಗಳಲ್ಲಿ ಇವರು ಮೃತಪಟ್ಟ ವ್ಯಕ್ತಿಗಳ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
೭ನೇ ವಯಸ್ಸಿನಲ್ಲಿ ಈಜು ಕಲಿತ ಇವರು ೨೦೧೯ರಲ್ಲಿ ಕೋರಂಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆಯೊಳಗಿದ್ದ ೫ ಮಂದಿ ಭೂಸಮಾಧಿಯಾದ ಸಂದರ್ಭ ಮಹಾಮಳೆಯ ಅಪಾಯ ಲೆಕ್ಕಿಸದೇ ಸ್ಥಳಕ್ಕೆ ತೆರಳಿ ಐವರ ಪಾರ್ಥಿವ ಶರೀರಗಳನ್ನು ಮಣ್ಣಿನ ಗುಡ್ಡೆಯಿಂದ ಹೊರತೆಗೆದಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನಿಂದ ಜೀವರಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಸAಸ್ಥೆಗಳು ಮುತ್ತಪ್ಪ ಅವರನ್ನು ಗೌರವಿಸಿ ಸನ್ಮಾನಿಸಿದೆ.
ಮೇ ೧೦ ರಂದು ಕೊಡಗು ಜಿಲ್ಲೆಯ ಮತಗಟ್ಟೆಗಳಿಗೆ ಪ್ರತಿಯೋರ್ವ ಮತದಾರರು ತೆರಳಿ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು. ಮತಚಾಲ ವಣೆ ಪ್ರತಿ ಪ್ರಜೆಯ ಹಕ್ಕಾಗಿದ್ದು, ಈ ಹಕ್ಕನ್ನು ತಪ್ಪದೇ ನಿರ್ಭೀತಿಯಿಂದ ಚಲಾಯಿಸಬೇಕು ಎಂಬ ಸಂದೇಶ ವನ್ನು ಈ ಮೂವರು ರಾಯಭಾರಿಗಳು ಮುಂದಿನ ದಿನಗಳಲ್ಲಿ ವಿವಿಧ ಕಾರ್ಯ ಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಸಾರಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಸಿಇಓ ವಿವರಿಸಿದರು.
ಇದೇ ಸಂದರ್ಭ ಮೂವರು ರಾಯಭಾರಿಗಳನ್ನು ಗೌರವಿಸಲಾ ಯಿತು. ಅಲ್ಲದೆ ಮತದಾನ ಜಾಗೃತಿ ಸಂಬAಧ ಭಿತ್ತಿ ಪತ್ರ ಹಾಗೂ ವೀಡಿಯೋ ತುಣುಕನ್ನು ಬಿಡುಗಡೆ ಮಾಡಲಾಯಿತು.