ಮಡಿಕೇರಿ, ಏ. ೬: ಕಳೆದ ೨೦ ದಿನ ಗಳಿಂದ ನಾಪೋಕ್ಲು ಬಳಿಯ ಚೆರಿಯ ಪರಂಬು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ ಸೆಮಿಫೈನಲ್ ಹಂತಕ್ಕೆ ತಲುಪಿದ್ದು, ತಾ. ೭ ರಂದು (ಇಂದು) ರೋಚಕ ಸೆಮಿಫೈನಲ್ ಪಂದ್ಯಾವಳಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಹಾಕಿ ಹಬ್ಬದ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಳೆದ ೨೦ ದಿನಗಳಿಂದ ಪಂದ್ಯಾವಳಿ ಯಾವದೇ ತೊಡಕಿಲ್ಲದೆ ಯಶಸ್ವಿಯಾಗಿ ನಡೆದಿದೆ. ತಾ. ೭ ರಂದು ಸೆಮಿಫೈನಲ್ ಹಂತದ ಆಟಗಳು ನಡೆಯಲಿವೆ. ಮೊದಲ ಸೆಮಿಫೈನಲ್ ಪಂದ್ಯವನ್ನು ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ, ಭಾರತ ತಂಡದ ಮಾಜಿ ನಾಯಕ ಮನೆಯಪಂಡ ಎಂ. ಸೋಮಣ್ಣ, ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ ಬೊವ್ವೇರಿಯಂಡ ಕುಟ್ಟಪ್ಪ ಉದ್ಘಾಟಿಸುವರು. ಅಪ್ಪಚೆಟ್ಟೋಳಂಡ ಪಟ್ಟೆದಾರ ಮಿಟ್ಟು ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪೂಮಾಲೆ ವಾರಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಾಣಿಪಂಡ ಸಂತೋಷ್ ಉಪಸ್ಥಿತರಿರುವರು. ಎರಡನೇ ಸೆಮಿಫೈನಲ್ ಪಂದ್ಯವನ್ನು ಅಂತರರಾಷ್ಟಿçÃಯ ಹಾಕಿ ತೀರ್ಪುಗಾರರುಗಳಾದ ಅಚ್ಚಕಾಳಿರ ಪಳಂಗಪ್ಪ, ಅಯ್ಯುಡ ವೇಣು ಉತ್ತಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮೋಬಿಯಸ್ ಫೌಂಡೇಶನ್‌ನ ಮಣವಟ್ಟಿರ ಮಧು ಬೋಪಣ್ಣ, ಅದ್ವೆöÊತ್ ಹುಂಡೈ ವ್ಯವಸ್ಥಾಪಕ ನಿರ್ದೇಶಕ ಎಸ್‌ವಿಎಸ್ ಸುಬ್ರಮಣ್ಯ ಗುಪ್ತ ಉಪಸ್ಥಿತರಿರುವರು ಎಂದು ತಿಳಿಸಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಆಸ್ಟೆçÃಲಿಯಾದ ಸಿಡ್ನಿಯಲ್ಲಿ ನಡೆದ ಮಾಸ್ರ‍್ಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ ಪಾಲೆಕಂಡ ಬೋಪಯ್ಯ, ಪಾಲೆಕಂಡ ಬೆಳ್ಳಿಯಪ್ಪ, ಮಾರಮಾಡ ಮಾಚಮ್ಮ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಗುವದೆಂದು ಮನು ಮುತ್ತಪ್ಪ ತಿಳಿಸಿದರು.

೨೫ ಮಂದಿ ಆಟಗಾರರ ಆಯ್ಕೆ

ಈ ಒಂದು ಹಾಕಿ ಹಬ್ಬದಲ್ಲಿ ಭಾಗವಹಿಸಿದ ಪ್ರತಿಭಾವಂತ ೨೫ ಮಂದಿ ಆಟಗಾರರನ್ನು ಗುರುತಿಸಿ ಆಯ್ಕೆ ಮಾಡಿ

(ಮೊದಲ ಪುಟದಿಂದ) ಅವರುಗಳಿಗೆ ಹಾಕಿ ಸ್ಟಿಕ್ ನೀಡಲಾಗುವದು. ನಂತರದಲ್ಲಿ ಸರಕಾರದ ಅನುದಾನ ಬಂದ ಬಳಿಕ ಭಾರತ ತಂಡಕ್ಕೆ ಆಯ್ಕೆಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವದು. ಕ್ರೀಡೆಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಹಾಕಿಕೊಂಡಿರುವದಾಗಿ ಹೇಳಿದರು.

ಜಾಗೃತಿ-ರಕ್ತದಾನ ಶಿಬಿರ

ಆರೋಗ್ಯ ಹಾಗೂ ಮಾನಸಿಕ ಸಮತೋಲನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ. ಮೈಂಡ್ ಅಂಡ್ ಮ್ಯಾಟರ್‌ನ ದೀಪಿಕಾ ಅಚ್ಚಯ್ಯ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೈಸೂರಿನ ಲಯನ್ಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಕೂಡ ಏರ್ಪಡಿಸಲಾಗಿದೆ. ಇದರೊಂದಿಗೆ ಬೆಂಗಳೂರಿನ ಯುವಕರ ತಂಡವೊAದು ಸೈಕಲ್ ಮೂಲಕ ಆಗಮಿಸಿ ಮೈದಾನವನ್ನು ಪ್ರವೇಶಿಸಲಿದೆ ಎಂದು ತಿಳಿಸಿದರು.

ಕ್ರೀಡಾ ಕೋಟಾದಡಿ ಆಯ್ಕೆ

ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿಯವರು ತಾ. ೮ ರಂದು ಜಲಕ್ರೀಡೆ, ಫುಟ್ಬಾಲ್, ಷಟಲ್ ಸೇರಿದಂತೆ ಇತರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಮುಂದಿನ ಒಲಂಪಿಕ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ತರಬೇತಿ ನೀಡಲಿದ್ದಾರೆ. ಅಲ್ಲದೆ ರಾಜ್ಯ, ರಾಷ್ಟçಮಟ್ಟದಲ್ಲಿ ಪ್ರತಿನಿಧಿಸುವ ವಿದ್ಯಾರ್ಥಿ ಶಾಲಾ ಶುಲ್ಕ ಭರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆಸಕ್ತರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದೆಂದು ಮನು ಮುತ್ತಪ್ಪ ತಿಳಿಸಿದರು.

ತಾ. ೯ ರಂದು ಫೈನಲ್

ಕಳೆದ ೨೦ ದಿನಗಳಿಂದ ನಡೆದ ಹಾಕಿ ಹಬ್ಬದ ಅಂತಿಮ ಪಂದ್ಯಾವಳಿ ತಾ. ೯ ರಂದು ನಡೆಯಲಿದೆ. ಅಪ್ಪಚೆಟ್ಟೋಳಂಡ ಪಟ್ಟೆದಾರ ಮಿಟ್ಟು ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ದಿ. ಪಾಂಡAಡ ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ ಬಲ್ಟಿಕಾಳಂಡ ಚೆಂಗಪ್ಪ, ಗಾರ್ಡನ್ ಸಿಟಿ ಯೂನಿವರ್ಸಿಟಿ ಕುಲಪತಿ ಡಾ. ವಿ.ಜಿ. ಜೋಸೆಫ್, ಕೆಎಐಜಿ ವ್ಯವಸ್ಥಾಪಕ ನಿರ್ದೇಶಕ ಕುಟ್ಟಂಡ ಸುಧಿನ್ ಮಂದಣ್ಣ, ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ, ಲಾಸ್ ಏಂಜಲ್ಸ್ ಒಲಂಪಿಕ್ ತಂಡದ ಮಾಜಿ ನಾಯಕ ಝಫರ್ ಇಕ್ಬಾಲ್, ಭಾರತ ಹಾಕಿ ತಂಡದ ಮಾಜಿ ನಾಯಕ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ವಿಜೇತ ಧನರಾಜ್ ಪಿಳ್ಳೆöÊ, ಒಲಂಪಿಯನ್ ಡಾ. ಅಂಜಪರವAಡ ಬಿ. ಸುಬ್ಬಯ್ಯ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಎಸ್.ವಿ. ಸುನಿಲ್ ಪಾಲ್ಗೊಳ್ಳಲಿದ್ದಾರೆ. ಅಂತಿಮ ಪಂದ್ಯಾಟವನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜೇತರಿಗೆ ರೂ. ೩ ಲಕ್ಷ

ಅಪ್ಪಚೆಟ್ಟೋಳಂಡ ಕಪ್ ವಿಜೇತರಿಗೆ ರೂ. ೩ ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗೆ ರೂ. ೨ ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದು ತಿಳಿಸಿದರು. ಕಳೆದ ೨ ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ಆ್ಯಂಬ್ಯುಲೆನ್ಸ್ನೊAದಿಗೆ ಮೈದಾನದಲ್ಲಿ ಸಹಕಾರ ನೀಡುತ್ತಿದೆ ಎಂದು ಶ್ಲಾಘಿಸಿದರು. ಗೋಷ್ಠಿಯಲ್ಲಿ ಹಾಕಿ ಹಬ್ಬ ಸಮಿತಿಯ ಗೌರವ ಕಾರ್ಯದರ್ಶಿ ಮಿಥುನ್ ಮಾಚಯ್ಯ, ಮನು ಮಾದಪ್ಪ, ಸೋಮಣ್ಣ, ರಾಧಿಕಾ ಮಂದಪ್ಪ, ಶಶಿ ಜನತ್ ಇದ್ದರು.