ಶ್ರೀಮಂಗಲ, ಏ. ೭: ಪೊನ್ನಂಪೇಟೆ ತಾಲೂಕು ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಾಚೀರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶುಕ್ರವಾರದ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸಿ ೮ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿವೆೆ.

೮ ಓವರ್ ಪಂದ್ಯದಲ್ಲಿ ಬೊಟ್ಟಂಗಡ (೫೭/೯) ತಂಡದ ವಿರುದ್ಧ ಪಂದ್ಯAಡ (೫೮/೩) ತಂಡ ಗೆಲುವು ಸಾಧಿಸಿತು. ಕಾಣತಂಡ (೫೦/೬) ತಂಡದ ವಿರುದ್ಧ ಕೊಟ್ಟಂಗಡ ತಂಡ (೬೦/೩) ಗೆಲುವು ಸಾಧಿಸಿತು.

ಕಳಕಂಡ (೭೯/೩) ತಂಡ ಮಚ್ಚಮಾಡ (೩೨/೫) ತಂಡವನ್ನು ಸೋಲಿಸಿತು. ತೀತಿರ ಹುದಿಕೇರಿ (೩೨/೯) ತಂಡದ ವಿರುದ್ಧ ಅಳಮೇಂಗಡ (೩೬/೧) ತಂಡ ಗೆಲುವು ಸಾಧಿಸಿತು. ತಂಬುಕುತ್ತೀರ (೬೮/೨) ತಂಡದ ವಿರುದ್ಧ ಮಂಡುವAಡ (೬೯/೨) ತಂಡ ಗೆಲುವು ಸಾಧಿಸಿತು. ಅಪ್ಪಾರಂಡ (೨೧/೮) ತಂಡ ವಿರುದ್ಧ ಅಣ್ಣಳಮಾಡ ತಂಡ (೨೭/೧) ಗೆಲುವು ಪಡೆಯಿತು. ಚೆಕ್ಕೇರ ತಂಡ (೪೫/೭) ಚೊಟ್ಟೆಯಾಂಡಮಾಡ (೪೧/೫) ತಂಡದ ವಿರುದ್ಧ ಗೆಲುವು ಸಾಧಿಸಿತು. ತಾ. ೮ರಂದು (ಇಂದು) ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.