ಭಾಗಮಂಡಲ, ಏ. ೭: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕುದುಕುಳಿ ಐನ್‌ಮನೆ ಕಪ್‌ನಲ್ಲಿ ಪೊನ್ನಚನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಬೊಳ್ತಾಜ್ಜಿರ ಪೊನ್ನಚÀನ ನಡುವಿನ ಪಂದ್ಯದಲ್ಲಿ ಪೊನ್ನಚನ ತಂಡ ೨೦ ರನ್‌ಗಳಲ್ಲಿ ಗೆಲುವು ಸಾಧಿಸಿತು. ಶೇರ ಮರಕಡ ಪಟ್ಟಡ ತಂಡದ ವಿರುದ್ಧ ಭರ್ಜರಿ ೫೦ ರನ್‌ಗಳ ಗೆಲುವು ಸಾಧಿಸಿತು.

ಉಪ್ಪಳಿಕೆ ತಂಡ ಹೊದ್ದೆಟ್ಟಿ ತಂಡದ ವಿರುದ್ಧ ೧೦ ವಿಕೆಟ್‌ಗಳ ಜಯ ಸಾಧಿಸಿದರೆ ನಾಲ್ಕನೇ ಪಂದ್ಯದಲ್ಲಿ ಕುಡೆಕಲ್ಲು ತಂಡ ಹುಲಿಮನೆ ತಂಡದ ವಿರುದ್ಧ ೧೦ ವಿಕೆಟ್‌ಗಳ ಜಯ ಸಾಧಿಸಿತು. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಪೊನ್ನಚನ ತಂಡ ಶೆರ ಮರಕಡ ತಂಡದ ವಿರುದ್ಧ ೭ ರನ್‌ಗಳ ಜಯ ಸಾಧಿಸಿದರೆ ಎರಡನೇ ಪಂದ್ಯದಲ್ಲಿ ಕುಡೆಕಲ್ಲು ತಂಡ ಉಪ್ಪಳಿಕೆ ತಂಡದ ವಿರುದ್ಧ ೧೪ ರನ್‌ಗಳ ಜಯ ಸಾಧಿಸಿತು. ಪ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕುಡೆಕಲ್ಲು ಮತ್ತು ಪೊನ್ನಚನ ತಂಡಗಳ ನಡುವಿನ ಪಂದ್ಯ ಡ್ರಾ ಆದ ಹಿನ್ನೆಲೆ ಸೂಪರ್ ಓವರ್‌ನಲ್ಲಿ ಪೊನ್ನಚನ ತಂಡ ಗೆಲುವು ಸಾಧಿಸಿ ಕ್ವಾಟರ್ ಫೈನಲ್‌ಗೆ ಲಗ್ಗೆ ಇಟ್ಟಿತು.