ಮಡಿಕೇರಿ, ಏ. ೫: ಇಲ್ಲಿಗೆ ಸಮೀಪದ ಕಡಂದಾಳು, ಕಾಂಡನಕೊಲ್ಲಿ, ಕೊಪ್ಪತ್ತೂರು, ಹಾಲೇರಿ ಹಾಗೂ ಹೆಮ್ಮೆತ್ತಾಳು ಗ್ರಾಮದ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ತಾ.೨ರಂದು ದೊಡ್ಡ ಹಬ್ಬವು ಆಂಗೋಲ ಪೊಂಗೋಲದೊAದಿಗೆ ನಾಡು ಹತ್ತುವದರೊಂದಿಗೆ ಆರಂಭಗೊAಡಿತು. ಕೊಂಬಾಟ, ಬಿಲ್ಲಾಟ, ಎಲ್ಲಾಟಗಳು ನಡೆದವು. ಮಧ್ಯಾಹ್ನ ಭಂಡಾರ ಹಾಕುವದರೊಂದಿಗೆ ಬೆಳಕಾಟ, ದೇವರು ಹೊರಗೆ ಬರುವದು, ಕಾಯಿಗೆ ಗುಂಡು ಹೊಡೆಯುವದು, ಕಾಳೆ ಸುತ್ತು ಬರುವ ಕಾರ್ಯಕ್ರಮ ನಡೆಯಿತು. ತಾ.೩ರಂದು ಕುಣಿತ, ಭಂಡಾರ ಹಾಕುವದು, ಕೊಂಬು ಒಪ್ಪಿಸುವದರೊಂದಿಗೆ ಉತ್ಸವ ಸಂಪನ್ನಗೊAಡಿತು. ಉತ್ಸವದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.