ಸುಂಟಿಕೊಪ್ಪ, ಏ. ೫: ಇಲ್ಲಿಗೆ ಸಮೀಪದ ೭ನೇ ಮೈಲು ಕೊರಗಜ್ಜ ದೈವದ ನೇಮವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕೆದಕಲ್ ಗ್ರಾಮ ಪÀಂಚಾಯಿತಿಯ ೭ನೇ ಮೈಲು ಕೊರಗಜ್ಜ ದೈವದ ನೇಮವು ೩ ದಿನಗಳ ಕಾಲದ ಉತ್ಸವದಲ್ಲಿ ಪಾಷಾಣಮೂರ್ತಿ, ಕಲ್ಕುಡ ದೈವ, ದೈವರಾಜ ಗುಳಿಗ, ಪಂಜುರ್ಲಿ, ನೇಮ, ಚಾಮುಂಡಿ ಗುಳಿಗ ಮತ್ತು ಮಂತ್ರ ದೇವತೆ , ಕೊರಗ ತನಿಯ ಅಜ್ಜನ ನೇಮವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕಂಬಿಬಾಣೆ, ಕೊಡಗರಹಳ್ಳಿ, ಸುಂಟಿಕೊಪ್ಪ, ಕಾನ್ಬೈಲು, ಮಂಜಿಕೆರೆ, ಎಮ್ಮೆ ಗುಂಡಿ, ಪನ್ಯ, ಹರದೂರು, ಬೆಟ್ಟಗೇರಿ ಸೇರಿದಂತೆ ಗ್ರಾಮಗಳ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಹರಕೆ ಒಪ್ಪಿಸಿ ಪ್ರಾರ್ಥಿಸಿದರು. ಕೊರಗಜ್ಜ ಸೇವಾ ಸಮಿತಿ ಹಾಗೂ ಕುಟುಂಬಸ್ಥರಾದ ಐತ್ತಪ್ಪ, ವಸಂತ, ದೇವಕ್ಕಿ, ಚಿನ್ನಪ್ಪ ಈ ಸಂದರ್ಭ ಹಾಜರಿದ್ದರು.