ಕುಶಾಲನಗರ, ಏ. ೫: ಕುಶಾಲನಗರ ಗಡಿ ಭಾಗದ ಮೈಸೂರು ಜಿಲ್ಲೆಯ ಕೊಪ್ಪ ಕಡೆಯಿಂದ ಜಿಲ್ಲೆಗೆ ಆಗಮಿಸಿದ ೫ ವಾಹನಗಳಲ್ಲಿ ದಾಖಲೆ ಇಲ್ಲದೆ ಸಾಗಾಟವಾಗುತ್ತಿದ್ದ ಒಟ್ಟು ೯.೩ ಲಕ್ಷ ರೂ.ಗಳನ್ನು ಪತ್ತೆ ಮಾಡಿ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ವಶಕ್ಕೆ ಪಡೆದ ಘಟನೆ ನಡೆದಿದೆ.
ಮೈಸೂರು ಕೊಡಗು ಗಡಿ ಭಾಗ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾ ಅಧಿಕಾರಿಗಳ ತಂಡ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭ ಗೂಡ್ಸ್ ವಾಹನದಲ್ಲಿ ರೂ. ೩.೭೨ ಲಕ್ಷ, ೩ ಬೈಕ್‌ಗಳಲ್ಲಿ ತಲಾ ರೂ. ೨.೯೫ ಲಕ್ಷ, ರೂ. ೧.೩ ಲಕ್ಷ ಮತ್ತು ರೂ. ೯೩ ಸಾವಿರ ಹಾಗೂ ಲಾರಿಯಲ್ಲಿ ೭೫ ಸಾವಿರ ರೂ.ಗಳನ್ನು ಪತ್ತೆ ಹಚ್ಚಿದೆ.
ಹಣ ಸಾಗಾಟಕ್ಕೆ ಸಂಬAಧಿಸಿದAತೆ ದಾಖಲೆಗಳನ್ನು ಒಪ್ಪಿಸಿದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಹಣವನ್ನು ವಾಪಸ್ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಅಧಿಕಾರಿಗಳ ತಂಡದ ಬಿ.ಎ. ನಾರಾಯಣ ರೆಡ್ಡಿ ನೇತೃತ್ವದಲ್ಲಿ ಕಿರಣ್, ಹೇಮರಾಜು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಂದ್ರ, ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಿ.ಕೆ. ಗಣಪತಿ, ಜಯಪ್ರಕಾಶ್, ಅರಣ್ಯ ಇಲಾಖೆಯ ಇಲಾಖೆಯ ಮೇದಪ್ಪ, ಧರ್ಮ ಪಾಲ, ಧರ್ಮ ಮತ್ತು ಪೊಲೀಸ್ ಸಿಬ್ಬಂದಿಗಳು ನಿರಂತರ ವಾಹನ ತಪಾಸಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
-ಚAದ್ರಮೋಹನ್