ಮಡಿಕೇರಿ, ಏ. ೫: ವೃದ್ಧರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಟಕೇರಿಯಲ್ಲಿ ನಡೆದಿದೆ.
ಕಾಟಕೇರಿ ಗ್ರಾಮ ಕೆ.ಎ. ಉತ್ತಪ್ಪ (೭೬) ಎಂಬವರೆ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಉತ್ತಪ್ಪ ಅವರು ನಿನ್ನೆ ಮನೆಯಿಂದ ಅನತಿ ದೂರದಲ್ಲಿ ಬಂದೂಕಿನಿAದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.