ವೀರಾಜಪೇಟೆ, ಏ. ೫: ಶಿವಕೇರಿಯಲ್ಲಿರುವ ಶ್ರೀ ದುರ್ಗಿ, ವಿಷ್ಣುಮೂರ್ತಿ, ನಾಗ ದೇವರ ಪ್ರತಿಷ್ಠಾ ವರ್ದಂತಿ ವಾರ್ಷಿಕೋತ್ಸವ ತಾ. ೯ ರಂದು ನಡೆಯಲಿದೆ.

ವಾರ್ಷಿಕೋತ್ಸವದ ಅಂಗವಾಗಿ ತಾ. ೯ ರಂದು ಬೆಳಿಗ್ಗೆ ೮ ಗಂಟೆಗೆ ಪ್ರಧಾನ ಕಲಶ ಹೋಮ, ದುರ್ಗಾ ಹೋಮ, ಆಶ್ಲೇಷ ಬಲಿ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಲಶ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.