ಶ್ರೀಮಂಗಲ, ಏ. ೪: ಬಾಡಗರಕೇರಿ ಗ್ರಾಮದ ಶತಾಯುಷಿ ಕುಪ್ಪುಡೀರ ಐ. ಕಾಳಪ್ಪ ಅವರನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಬ್ರಿಟಷ್ ಆಡಳಿತದಲ್ಲಿ ಕುಪ್ಪುಡೀರ ಐ. ಕಾಳಪ್ಪ ಅವರು ಸರಕಾರಿ ಮುದ್ರಣಾಲಯದಲ್ಲಿ ಸೇವೆ ಸಲ್ಲಿಸಿ, ನಂತರ ಬಿರುನಾಣಿ ಸರಕಾರಿ ಶಾಲೆ, ಪಂಚಾಯಿತಿ ಬೋರ್ಡ್, ಸ್ಥಳೀಯ ದೇವಸ್ಥಾನ ಅಭಿವೃದ್ಧಿ, ಮರೆನಾಡು ಕೊಡವ ಸಮಾಜ, ದೇವರಕಾಡು ಸಂರಕ್ಷಣಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಇವರ ಅಜ್ಜ ಕುಪ್ಪುಡೀರ ಚಿಣ್ಣಪ್ಪ, ಅಜ್ಜಿ ಮಾಯಮ್ಮ ಕೂಡ ಶತಾಯುಷಿಯಾಗಿ ಜೀವನ ಸಾಗಿಸಿರುವುದು ಕೂಡ ಹೆಮ್ಮೆಯ ವಿಚಾರ ಎಂದರು.

ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ, ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ಪ್ರಮುಖರಾದ ಕೊಳ್ಳಿಮಾಡ ಎನ್. ಕಾರ್ಯಪ್ಪ, ಮಾಚಿಮಾಡ ಲೌಲಿ ಸೋಮಯ್ಯ, ಕೇಚೆಟ್ಟೀರ ಕಾಮುಣಿ ಪೂಣಚ್ಚ, ಪೂರ್ಣಿಮಾ ಇದ್ದರು.