ಸೋಮವಾರಪೇಟೆ, ಏ. ೪: ಒಂದು ದೇಶ-ಒಂದು ಪಿಂಚಣಿ ಯೋಜನೆಯಡಿ ಮಾಜಿ ಸೈನಿಕರಿಗೆ ನೀಡಲಾಗುತ್ತಿರುವ ಪಿಂಚಣಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘ ದಿಂದ ತಾಲೂಕು ಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಓಆರ್‌ಓಪಿ-೨ರಲ್ಲಿನ ಉಳಿಕೆ ಹಣವನ್ನು ಒಂದೇ ಬಾರಿಗೆ ಜಮೆ ಮಾಡಬೇಕು. ಎಂ.ಎಸ್.ಪಿ ಹಣವನ್ನು ಎಲ್ಲಾ ರ‍್ಯಾಂಕ್‌ನ ಅಧಿಕಾರಿಗಳಿಗೆ ಸಮಾನವಾಗಿ ನೀಡಬೇಕು. ವಿಕಲಚೇತನರಿಗೆ ನೀಡುವ ಪಿಂಚಣಿಯಲ್ಲಿ ತಾರತಮ್ಯ ಮಾಡಬಾರದು ಎಂಬಿತ್ಯಾದಿ ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಉಪಾಧ್ಯಕ್ಷ ಸುಬ್ರಮಣ್ಯ, ಖಜಾಂಚಿ ಬಸಪ್ಪ, ಪದಾಧಿಕಾರಿ ಗಳಾದ ಲಿಂಗಪ್ಪ, ಪೂವಯ್ಯ, ಕೆಂಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.