(ಪ್ರಜ್ವಲ್ ಜಿ.ಆರ್.)
ಕೋಟಿ-ಕೋಟಿ ವರ್ಷಗಳಿಂದ ಚಲನೆ ನಿಲ್ಲಿಸದೆ, ಹತ್ತಾರು ಹಿಮಯುಗಗಳ ಚಕ್ರ, ಸಹಸ್ರಾರು ಜ್ವಾಲಾಮುಖಿಗಳು, ಚಂಡಮಾರುತಗಳನ್ನು ಲೆಕ್ಕಿಸದೆ ಸಕಲ ಜೀವರಾಶಿಗಳಿಗೆ ಇಂದಿಗೂ ಆಸರೆಯಾಗಿರುವ ಭೂಮಿಯ ಸಾಮರ್ಥ್ಯ, ಶಕ್ತಿಯನ್ನು ನಾವು ಊಹಿಸಲೂ ಅಸಾಧ್ಯ. ಕ್ಲಿಷ್ಟಕರ ಪರಿಸ್ಥಿತಿಗಳನ್ನೆಲ್ಲಾ ಅಲ್ಲಗಳೆದು ಸಾಗಿರುವ, ಸಾಗುತ್ತಿರುವ ಭೂಮಿಯು ಹೊರನೋಟಕ್ಕೆ ಬಲಶಾಲಿಯಾಗಿ ಕಂಡರೂ, ವಿವಿಧ ರೀತಿಯ ವೈಜ್ಞಾನಿಕ ಅಧ್ಯಯನಗಳ ನಂತರ ಭೂಮಿಯ ಸೂಕ್ಷö್ಮತೆಯ ಅರಿವು ನಮಗಾಗಿದೆ. ಭೂಮಿ, ನೋಡಲು ಪರಿಪೂರ್ಣ ಗೋಳಾಕಾರವಾಗಿದ್ದರೂ, ಈ ಗೋಳವು ಬಿಡಿಭಾಗಗಳಿಂದ ಸೃಷ್ಟಿಯಾಗಿದೆ ಎಂಬ ವಿಷಯ ಬಹುತೇಕ ಮಂದಿಗೆ ತಿಳಿದಿಲ್ಲ.
ಭೂಮಿಯ ಇತಿಹಾಸದಲ್ಲಿ ಇಂತಹ ಬಿಡಿ-ಭಾಗಗಳ (ಟೆಕ್ಟಾನಿಕ್ ಪ್ಲೇಟ್ಸ್) ಪಾತ್ರ ಮಹತ್ವದ್ದು. ಪ್ರಸ್ತುತ ಭೂಮಿಯಲ್ಲಿ ಏಷಿಯಾ, ಯೂರೋಪ್, ಆಸ್ಟೆçÃಲಿಯಾ, ಆಫ್ರಿಕಾ, ಅಂಟಾರ್ಕ್ಟಿಕಾ, ಉತ್ತರ ಹಾಗೂ ದಕ್ಷಿಣ ಅಮೇರಿಕಾ ಹೆಸರುಗಳಲ್ಲಿ ೭ ಖಂಡಗಳಿವೆಯಾದರೂ ಕೋಟಿ-ಕೋಟಿ ವರ್ಷಗಳ ಹಿಂದೆ ಈ ಅಂಶ ಸತ್ಯವಾಗಿರಲಿಲ್ಲ. ಪ್ಯಾಂಜಿಯಾ ಹೆಸರಿನ ಒಂದೇ ಖಂಡವು ಒಂದೇ ಬೃಹತ್ ಸಮುದ್ರದ ನಡುವೆ ಅಸ್ತಿತ್ವದಲ್ಲಿತ್ತು. ಈ ಖಂಡವು ಹಲವಾರು ಬಿಡಿಭಾಗಗಳಿಂದ(ಟೆಕ್ಟಾನಿಕ್ ಪ್ಲೇಟ್ಸ್) ಕೂಡಿತ್ತು. ಇಂತಹ ಪ್ಲೇಟ್ಗಳು ಭೂಮಿಯ ಒಳಪದರದ ಅತ್ಯಂತ ಶಾಖ ಭರಿತ ಜ್ವಾಲೆಗಳ ಪರಿಣಾಮದಿಂದಾಗಿ ಕಾಲಚಕ್ರ ಉರುಳಿದಂತೆ ಒಂದರಿAದ ಒಂದು ದೂರ ಸರಿದ ಪರಿಣಾಮ ಇಂದು ೭ ಖಂಡಗಳು ಸೃಷ್ಟಿಯಾಗಿವೆ ಎಂಬುದು ಭೂವಿಜ್ಞಾನಿಗಳ ಸಿದ್ಧಾಂತ.
ಈ ಪ್ರಸಂಗ ಅತ್ಯಂತ ನಿಧಾನಗತಿಯದ್ದಾಗಿದ್ದರೂ ಟೆಕ್ಟಾನಿಕ್ ಪ್ಲೇಟ್ಗಳ ಇಂತಹ ಚಲನಕ್ಕೆ ಅನೇಕ ಸಾಕ್ಷಾö್ಯಧಾರಗಳಿವೆ. ಭೂಮಿಯಲ್ಲಿ ಸಂಭವಿಸುವ ದೊಡ್ಡ ಪ್ರಮಾಣದ ಭೂಕಂಪನ, ಎಗ್ಗಿಲ್ಲದೆ ಬೆಳೆದಿರುವ ಹಿಮಾಲಯ ಸೇರಿದಂತೆ ಇತರ ಪರ್ವತಗಳ ಸಾಲು ಹಾಗೂ ಪರ್ವತಗಳಿಂದ ಚಿಮ್ಮುವ ಜ್ವಾಲಾಮುಖಿಗಳು ಹಾಗೂ ಹೊಸದಾಗಿ ಉದ್ಭವಿಸುವ ಕೆರೆಗಳು, ಟೆಕ್ಟಾನಿಕ್ ಪ್ಲೇಟ್ಗಳ ವರ್ಷಾನುಗಟ್ಟಲೆಯ ಚಲನ-ವಲನದಿಂದ ಸೃಷ್ಟಿಯಾಗಿರುವ, ಆಗುತ್ತಿರುವ ಪ್ರಸಂಗಗಳು.
ದೊಡ್ಡ ಪ್ರಮಾಣದ ಭೂಕಂಪನವು ಸಾಮಾನ್ಯವಾಗಿ ಇಂತಹ ಪ್ಲೇಟ್ಗಳ ಹಠಾತ್ ಘರ್ಷಣೆಯಿಂದ ಸಂಭವಿಸಿದರೆ, ಎರಡು ಪ್ಲೇಟ್ಗಳು ಒಂದರ ಮೇಲೊಂದು ಅವಿತುಕೊಂಡು ಪರ್ವತ ಸೃಷ್ಟಿಯಾಗುತ್ತದೆ. ಒಂದಕ್ಕೊAದು ಅಂಟಿಕೊAಡಿರುವ ಪ್ಲೇಟ್ಗಳು ಬೇರ್ಪಡುವುದಾದರೆ, ಭೂಮಿಯ ಒಳ ಪದರದಲ್ಲಿನ ಅತ್ಯಂತ ಶಾಖ ಭರಿತ ಜ್ವಾಲೆಯು ಹೊರಚಿಮ್ಮಿ ತಾತ್ಕಾಲಿಕ ಅಥವಾ ಶಾಶ್ವತ ಜ್ವಾಲಾಮುಖಿಗಳ ಜನನಕ್ಕೆ ನಾಂದಿ ಇಟ್ಟಂತಾಗುತ್ತದೆ. ಪ್ಲೇಟ್ ಸಂಪೂರ್ಣವಾಗಿ ಬೇರ್ಪಟ್ಟರೆ ಖಂಡಗಳೇ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ೨ ಖಂಡಗಳ ನಡುವೆ ಹೊಸ ಸಮುದ್ರವೇ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.
೭ ಖಂಡಗಳ ಪೈಕಿ ಗಾತ್ರದಲ್ಲಿ ೨ನೇ ಸ್ಥಾನ ಪಡೆದಿರುವ ಪ್ರಸ್ತುತದ ಆಫ್ರಿಕಾ ಖಂಡವು ಇದೀಗ ಇಂತಹ ಒಂದು ‘ಕಾಂಟಿನೆAಟಲ್ ಡ್ರಿಫ್ಟ್’ ಪ್ರಸಂಗಕ್ಕೆ ಸಾಕ್ಷಿಯಾಗಲಿದೆ. ಆಫ್ರಿಕಾದ ಟೆಕ್ಟಾನಿಕ ಪ್ಲೇಟ್ನಲ್ಲಿರುವ ಸೊಮಾಲಿ ಪ್ಲೇಟ್ ಬೇರ್ಪಡುವ ಹಂತದಲ್ಲಿದ್ದು, ಪೂರ್ವ ಆಫ್ರಿಕಾದಲ್ಲಿ ಹೊಸ ಖಂಡ ಹಾಗೂ ಇದರೊಂದಿಗೆ ಹೊಸ ಸಮುದ್ರ ಸೃಷ್ಟಿಯಾಗಲಿದೆ. ಇದು ಸಂಭವಿಸಲು ಲಕ್ಷಾನುಗಟ್ಟಲೆ ವರ್ಷಗಳು ಸಾಗಬೇಕಾದರೂ ಈಗಾಗಲೇ ‘ಈಸ್ಟ್ ಆಫ್ರಿಕನ್ ರಿಫ್ಟ್’ ವ್ಯಾಲಿಯಲ್ಲಿ ಭೂಮಿಯು ಎರಡು ಭಾಗಗಳಾಗಿದ್ದು, ಖಂಡ ಬೇರ್ಪಡುವ ಪ್ರಸಂಗ ಪ್ರಾರಂಭವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಆಫ್ರಿಕಾದ ಪೂರ್ವದಲ್ಲಿನ ಸೊಮಾಲಿ ಪ್ಲೇಟ್ ಮೆಲ್ಲಮೆಲ್ಲನೆ ಆಫ್ರಿಕಾ ಪ್ಲೇಟ್ನಿಂದ ೬,೦೦೦ ಕಿ.ಮೀ ಉದ್ದದ ‘ಈಸ್ಟ್ ಆಫ್ರಿಕನ್ ರಿಫ್ಟ್’ ಎಂಬಲ್ಲಿ ಬೇರ್ಪಡುತ್ತಿದೆ. ಈ ‘ಈಸ್ಟ್ ಆಫ್ರಿಕನ್ ರಿಫ್ಟ್’ನಲ್ಲಿನ ಇಥಿಯೋಪಿಯಾ ಎಂಬ ದೇಶದಲ್ಲಿ ಚಿತ್ರದಲ್ಲಿರುವ ಹಾಗೆ ೨೦೦೫ ರಲ್ಲಿಯೇ ದೊಡ್ಡ ಮಟ್ಟದ ೨೦ ಅಡಿ ಆಳ, ೫೬ ಕಿ.ಮೀ ಉದ್ದದ ಬಿರುಕು ಕಾಣಿಸಿಕೊಂಡಿತ್ತು. ೨೦೧೮ರಲ್ಲಿ ಇದೇ ರಿಫ್ಟ್ ಕಣಿವೆಯಲ್ಲಿ ೫೦ ಅಡಿ ಆಳದ ಬಿರುಕು ಸೃಷ್ಟಿಯಾಯಿತು. ಇವೆಲ್ಲವೂ ಖಂಡಗಳು ಬೇರ್ಪಡುತ್ತಿರುವ ಮುನ್ಸೂಚನೆ ಎಂಬುದಾಗಿ ವಿಜ್ಞಾನಿಗಳು ತೀವ್ರ ಅಧ್ಯಯನದ ಬಳಿಕ ಅಭಿಪ್ರಾಯಿಸಿದ್ದಾರೆ.
ಈಸ್ಟ್ ಆಫ್ರಿಕನ್ ರಿಫ್ಟ್ ಕಣಿವೆ ಎಂದರೆ ಆಫ್ರಿಕಾದ ಉತ್ತರದಿಂದ ದಕ್ಷಿಣಕ್ಕೆ ೬,೦೦೦ ಕಿ.ಮೀ ವ್ಯಾಪಿಸಿರುವ ಸಕ್ರಿಯ ಖಂಡ ವಿಭಜನಾ ಸ್ಥಳ. ೨ ಕೋಟಿ ವರ್ಷಗಳಿಂದ ಈ ಸ್ಥಳವು ವಾರ್ಷಿಕ ೬ ರಿಂದ ೭ ಮಿಲಿಮೀಟರ್ ಪೂರ್ವಕ್ಕೆ ಸರಿಯುತ್ತಿದೆ ಎಂಬುದು ಅಧ್ಯಯನಗಳಲ್ಲಿ ದೊರೆತ ಮಾಹಿತಿ. ಇದಕ್ಕೆ ಸಾಕ್ಷಾö್ಯಧಾರವಾಗಿ ಈ ಕಣಿವೆಯಲ್ಲಿ ನೂರಾರು ಕೆರೆಗಳು ನಿರ್ಮಾಣಗೊಂಡಿವೆ ಹಾಗೂ ಹಲವಾರು ಜ್ವಾಲಾಮುಖಿಗಳು ಎದ್ದು ನಿಂತಿವೆ. ಇದೀಗ ಭೂಮಿಯೇ ಬೇರ್ಪಡುವ ಉದಾಹರಣೆಗಳೂ ಇದ್ದು, ಮುಂದೊAದು ದಿನ ಸಂಪೂರ್ಣವಾಗಿ ಆಫ್ರಿಕಾ ಖಂಡದಿAದಲೇ ಈ ಕಣಿವೆಯ ಪೂರ್ವದ ಪ್ರದೇಶ ಬೇರ್ಪಟ್ಟು ಹೊಸ ಖಂಡ ಹಾಗೂ ಸಮುದ್ರಕ್ಕೆ ದಾರಿಮಾಡಲಿದೆ.