ನಾಪೋಕ್ಲು, ಏ. ೫: ಇಲ್ಲಿನ ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಸಂಪನ್ನಗೊAಡಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ತಾ. ೩ ರಂದು ಗಣಪತಿ ಹೋಮದೊಂದಿಗೆ ಉತ್ಸವ ಕಾರ್ಯಕ್ರಮ ಆರಂಭಗೊAಡು, ತಾ. ೪ ರಂದು ಮುತ್ತಪ್ಪ ದೇವರ ಕಲಶ, ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಮಹಿಳೆಯರಿಂದ ತಳಿಯಕ್ಕಿ ಬೊಳಕ್ ಹಾಗೂ ಕೇರಳದ ಪ್ರಖ್ಯಾತ ಚಂಡೆಯೊAದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಈ ಸಂದರ್ಭ ಭಕ್ತಾದಿಗಳಿಂದ ಹಣ್ಣು ಕಾಯಿ, ಈಡುಗಾಯಿ ಸೇವೆ ನಡೆಯಿತು. ರಾತ್ರಿ ದೇವಾಲಯದಲ್ಲಿ ಮುತ್ತಪ್ಪ ದೇವರ ಹಾಗೂ ಕುಟ್ಟಿಚಾತ ವೆಳ್ಳಾಟಂ ಜರುಗಿತು. ಬುಧವಾರ ಬೆಳಿಗ್ಗೆ ಗುಳಿಗ, ತಿರುವಪ್ಪ ಹಾಗೂ ಮುತ್ತಪ್ಪ ತೆರೆಗಳು ಜರುಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಉತ್ಸವ ಸಂಪನ್ನಗೊAಡಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್ ಉಪಾಧ್ಯಕ್ಷ ಶ್ರೀಧರ, ಕಾರ್ಯದರ್ಶಿ ರಾಜೀವನ್, ನಿರ್ದೇಶಕರು ಸೇರಿದಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.