ಮಡಿಕೇರಿ, ಏ. ೩ : ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಜಾಗದಲ್ಲಿ ಸುಬಧ್ರವಾದ ಕಟ್ಟಡವೊಂದು ಎದ್ದು ಕಾಣುತ್ತದೆ., ಒಂದಾನೊAದು ಕಾಲದಲ್ಲಿ ಈ ಕಟ್ಟಡದೊಳಗೆ ೪೦ರಿಂದ ೫೦ ಗೋವುಗಳು ಹಾಯಾಗಿ ಮಲಗುತ್ತಿದ್ದವು., ವಿಶಾಲವಾಗಿರುವ ಆರಣದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ ಮೇಯುತ್ತಿದ್ದವು., ಇದೀಗ ಈ ಕಟ್ಟಡ ಪಾಳುಬಿದ್ದಿದೆ., ಆವರಣದಲ್ಲಿನ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ಗಿಡಗಳ ನರ್ಸರಿ ನಿರ್ಮಾಣವಾಗಿದೆ. ಆದರೆ., ಸ್ಥಳೀಯ ಗೋವುಗಳ ರಕ್ಷಣೆ ಹಾಗೂ ಪುರಾತನವಾದ ಸರಕಾರಿ ಗೋಸದನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಗ್ರಾಮಸ್ಥರ ಹೋರಾಟವೂ ನಿರಂತರವಾಗಿದೆ..!
ಕೂಡಿಗೆಯಿAದ ಸೋಮವಾರಪೇಟೆ ಕಡೆಗೆ ತೆರಳುವ ಮಾರ್ಗದಲ್ಲಿ ಹುದುಗೂರು ಗ್ರಾಮ ಸಿಗುತ್ತದೆ. ಇಲ್ಲಿ ೧೯೨೫ನೇ ಇಸವಿಯಲ್ಲಿ ಬ್ರಿಟೀಷರ ಕಾಲದಲ್ಲಿ ಸ್ಥಾಪನೆಯಾಗಿರುವ ಗೋಸದನವೊಂದಿದೆ. ಎರಡೂವರೆ ಎಕರೆ ವಿಸ್ತೀರ್ಣ ಇರುವ ಈ ಜಾಗವನ್ನು ೧೯೮೯ ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ನರ್ಸರಿ ಮಾಡಲೆಂದು ಬಿಟ್ಟುಕೊಟ್ಟಿದ್ದು, ಇದೀಗ ಇಲಾಖೆ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಆದರೆ, ಗ್ರಾಮ ಹಾಗೂ ಸುತ್ತಮುತ್ತಲಿನಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗಿರುವದರಿಂದ ಈ ಜಾಗವನ್ನು ಮತ್ತೆ ಗೋಸದನಕ್ಕೆ ಮರಳಿಸಬೇಕೆಂಬದು ಗ್ರಾಮಸ್ಥರ ಹೋರಾಟವಾಗಿದೆ.
ಗಟ್ಟಿ ಮುಟ್ಟಾದ ಕಟ್ಟಡ
ಈ ಗೋಸದನದ ಕಟ್ಟಡ ೧೯೨೫ರಲ್ಲಿ ನಿರ್ಮಾಣವಾಗಿದೆ ಯಾದರೂ ಆಗಿನ ತಂತ್ರಜ್ಞಾನ ಹಾಗೂ ಗುಣಮಟ್ಟದಿಂದಾಗಿ ಇನ್ನೂ ಕೂಡ ಗಟ್ಟಿಮುಟ್ಟಾಗಿದೆ. ಸುಮಾರು ೪೦ರಿಂದ ೫೦ ಗೋವುಗಳನ್ನು ಸಲಹಲು ಬೇಕಾದ ವ್ಯವಸ್ಥೆಗಳಿವೆ. ಮೇವು ಹಾಕಲು., ಕುಡಿಯಲು ನೀರನ್ನೊದಗಿಸುವ ಸವಲತ್ತುಗಳಿವೆ. ಸದಸನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅವಶ್ಯಕವಾದ ವಸತಿ ಗೃಹಗಳೂ ಇವೆ. ಎಲ್ಲ ವ್ಯವಸ್ಥೆಗಳಿದ್ದರೂ ಪಾಳು ಬಿದ್ದ ಪಳೆಯುಳಿಕೆಯಂತೆ ಕಾಣುತ್ತಿದೆ..!
(ಮೊದಲ ಪುಟದಿಂದ)
ಅರಣ್ಯ ಇಲಾಖೆಗೆ ದಾಖಲೆ
ಬೀಡಾಡಿ ರಾಸುಗಳು., ರೈತರ ಜಾನುವಾರುಗಳನ್ನು ಸಲಹುವ ಸಲುವಾಗಿ ನಿರ್ಮಾಣಗೊಂಡ ಈ ಸರಕಾರಿ ಗೋಸದನ ಹಲವು ವರ್ಷಗಳ ಕಾಲ ಉತ್ತಮವಾಗಿ ನಿರ್ವಹಣೆಯಾಗುತ್ತಿತ್ತು. ನಂತರದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಈ ಜಾಗವನ್ನು ಅರಣ್ಯ ಇಲಾಖೆಗೆ ನರ್ಸರಿ ಮಾಡಲೆಂದು ನೀಡಲಾಯಿತು. ೧೯೮೯ರಲ್ಲಿ ರಲ್ಲಿ ಈ ಜಾಗವನ್ನು ನಿಡಲಾಗಿದ್ದು, ಇಲಾಖೆಯವರು ಸಮೃದ್ಧವಾಗಿ ಗಿಡಗಳನ್ನು ಬೆಳೆದು ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಾ ಬರುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಜಾಗದ ದಾಖಲೆಯನ್ನು ಇಲಾಖೆಯ ಸುಪರ್ದಿಗೆ ಮಾಡಿಕೊಂಡಿದ್ದು, ಇದು ತಡವಾಗಿ ಗ್ರಾಮಸ್ಥರ ಅರಿವಿಗೆ ಬಂದಿದೆ. ಹಾಗಾಗಿ ಇದೀಗ ಜಾಗವನ್ನು ಮರಳಿ ಗೋಸದನಕ್ಕೆ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ.
ಮರಳಿಸಲು ಆಗ್ರಹ
ಇದೀಗ ಗ್ರಾಮದಲ್ಲಿ ಜಾನುವಾರುಗಳು ಹೆಚ್ಚಾಗುತ್ತಿವೆಯಲ್ಲದೆ, ಜಿಲ್ಲೆಯಲ್ಲಿ ಬೀಡಾಡಿ ದನಗಳ ಸಂಖ್ಯೆಯೂ ಅಧಿಕವಾಗಿದೆ. ಅವುಗಳ ರಕ್ಷಣೆಗಾಗಿ ಹಾಗೂ ಗೋಸದನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗವನ್ನು ಕಂದಾಯ ಇಲಾಖೆಗೆ ಮರಳಿಸಬೇಕೆಂದು ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ಈ ಹಿಂದೆ ಸಭೆಗಳು ನಡೆದಿದ್ದು, ಗ್ರಾಮಸ್ಥರು ಪ್ರತಿಭಟನೆ ಕೂಡ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೂ ಮನವಿ ಸಲ್ಲಿಕೆಯಾಗಿದೆ. ಆದರೆ; ಅರಣ್ಯ ಇಲಾಖೆಯವರು ಬಿಟ್ಟು ಕೊಡಲು ತಯಾರಿಲ್ಲ, ಬದಲಿಗೆ ಪರ್ಯಾಯ ಜಾಗ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.
ಹೋರಾಟದ ಸೂಚನೆ
ಸಂಬAಧಿಸಿದ ಆಡಳಿತ ಈ ಬಗ್ಗೆ ಗಮನ ಹರಿಸಿ ಗೋಸದನದ ಜಾಗವನ್ನು ಅರಣ್ಯ ಇಲಾಖೆಯಿಂದ ಮರಳಿಸಿ ಮತ್ತೆ ಗೋಸದನ ಸ್ಥಾಪನೆ ಮಾಡಬೇಕು, ಆ ಮೂಲಕ ಗೋವುಗಳಿಗೆ ಆಶ್ರಯ ನೀಡುವಂತಾಗಬೇಕೆAದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯುವ ಮುನ್ಸೂಚನೆಯನ್ನು ಕೂಡ ನೀಡಿದ್ದಾರೆ.
ಎಲ್ಲೆಡೆ ಬೀಡಾಡಿ ದನಗಳು ಹೆಚ್ಚಾಗುತ್ತಿದ್ದು, ಗೋವುಗಳ ಕಳ್ಳತನ, ಅಕ್ರಮ ಸಾಗಾಟ ಕೂಡ ಕಂಡುಬರುತ್ತಿದೆ. ಇವುಗಳನ್ನು ರಕ್ಷಿಸುವ ಸಲುವಾಗಿ ಜಿಲ್ಲಾಡಳಿತ ಗಮನ ಹರಿಸಿ ಗೋಸದನವನ್ನು ಮರುಸ್ಥಾಪಿಸಿ ಆಶ್ರಯ ಕಲ್ಪಿಸಬೇಕಾಗಿದೆ. ಇಲ್ಲಿ ಹೊಸದಾಗಿ ಕಟ್ಟಡವಾಗಲೀ ಇನ್ನಿತರ ಸೌಕರ್ಯಕ್ಕಾಗಿ ವೆಚ್ಚ ಮಾಡುವ ಅವಶ್ಯಕತೆಯಿಲ್ಲ. ಒಂದಿಷ್ಟು ದುರಸ್ತಿ ಕಾರ್ಯ ಹಾಗೂ ಮೇವಿನ ವ್ಯವಸ್ಥೆ ಮಾಡಿಕೊಂಡರೆ ಸಾಕು.
-ಕುಡೆಕಲ್ ಸಂತೋಷ್, ಕೆ.ಕೆ.ನಾಗರಾಜಶೆಟ್ಟಿ