ಸೋಮವಾರಪೇಟೆ, ಏ.೩ : ರಾಜ್ಯ ವಿಧಾನ ಸಭಾ ಚುನಾವಣೆಯ ದಿನಾಂಕ ನಿಗದಿಗೊಂಡು ನೀತಿ ಸಂಹಿತೆ ಜಾರಿಯಲ್ಲಿದ್ದು, ಭಯಮುಕ್ತ ಚುನಾವಣೆ ನಡೆಸುವ ಸಂಬAಧ ಸೋಮವಾರಪೇಟೆ ಪಟ್ಟಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾಗೂ ಸ್ಥಳೀಯ ಪೊಲೀಸ್ ಇಲಾಖಾ ಸಿಬ್ಬಂದಿಗಳು ಪೆರೇಡ್ ನಡೆಸಿದರು.
ಶಸ್ತçಸಜ್ಜಿತ ಸಿಐಎಸ್ಎಫ್ ಸಿಬ್ಬಂದಿಗಳೊAದಿಗೆ ಪೊಲೀಸ್ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಪಟ್ಟಣದ ಪೊಲೀಸ್ ಠಾಣೆಯಿಂದ ಕ್ಲಬ್ರಸ್ತೆ, ಮಡಿಕೇರಿ ರಸ್ತೆ, ಮುಖ್ಯರಸ್ತೆ, ಖಾಸಗಿ ಬಸ್ ನಿಲ್ದಾಣ, ಸಿ.ಕೆ. ಸುಬ್ಬಯ್ಯ ರಸ್ತೆಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕ ವಲಯದಲ್ಲಿ ಭಯಮುಕ್ತ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಿದರು.
ವಿಧಾನ ಸಭಾ ಚುನಾವಣೆಯನ್ನು ಶಾಂತಿ ಸುವ್ಯವಸ್ಥೆಯೊಂದಿಗೆ ನಡೆಸಲು ಇಲಾಖೆ ಸಿದ್ದತೆ ಕೈಗೊಂಡಿದೆ. ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಧೈರ್ಯ ತುಂಬುವ ಹಾಗೂ ಭಯಮುಕ್ತರಾಗಿ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡುವ ಪ್ರಯತ್ನವಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ರಾಜ್, ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಶನಿವಾರಸಂತೆ ಇನ್ಸ್ಪೆಕ್ಟರ್ ನಾಗೇಶ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುಂಟಿಕೊಪ್ಪದಲ್ಲಿ
ಸುAಟಿಕೊಪ್ಪ: ಕೊಡಗು ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಕೈಗಾರಿಕ ರಕ್ಷಣಾ ಪಡೆ ಜಂಟಿಯಾಗಿ ಸುಂಟಿಕೊಪ್ಪದಲ್ಲಿ ಪಥ ಸಂಚಲನ ನಡೆಸಿತು.
ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ
(ಮೊದಲ ಪುಟದಿಂದ) ಸುಂದರರಾಜ್ ಕುಶಾಲನಗರ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಡಿ.ಎಸ್.ಪುನೀತ್ ಅವರೊಂದಿಗೆ ಸಿಐಎಫ್ನ ಅಧಿಕಾರಿ ಚೌಹಣ್ ೬೦ಕ್ಕೂ ಹೆಚ್ಚು ಮಂದಿಯ ಶಸ್ತçಸಜ್ಜಿತ ತುಕಡಿ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಸಾಗಿ ೧ನೇ ವಿಭಾಗದ ಗುಡ್ಡಪ್ಪ ರೈ ಬಡಾವಣೆ, ಪಂಪ್ಹೌಸ್, ಮಧುರಮ್ಮ ಬಡಾವಣೆಗಾಗಿ ಸಾಗಿ ಪೊಲೀಸ್ ಠಾಣೆಯ ತನಕ ಮೆರವಣಿಗೆ ನಡೆಸಿತು.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಸುಂದರ್ರಾಜ್ ಕೊಡಗಿನ ಜನತೆ ಶಾಂತಿಪ್ರಿಯರು ಮಾತ್ರವಲ್ಲದೆ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದಾರೆ. ಆದರೂ ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಇದ್ದಾರೆ. ಇಂತಹವರಿಗೆ ಎಚ್ಚರಿಕೆ ಹಾಗೂ ಶಾಂತಿಪ್ರಿಯ ಜನರಿಗೆ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇಂದಿನ ಪಥಸಂಚಲನ ಮಾಡಿದ್ದೇವೆ ಎಂದು ಹೇಳಿದರು. ತಾ. ೪ ರಂದು (ಇಂದು) ಕುಶಾಲನಗರದಲ್ಲಿ ಪಥ ಸಂಚಲನ ನಡೆಯಲಿದೆ.