ಮಡಿಕೇರಿ, ಏ. ೪: ಅರಪಟ್ಟು ಮತ್ತು ಪೊದವಾಡ ಗ್ರಾಮದ ಭಗವತಿ ಹಾಗೂ ವಿಷ್ಣುಮೂರ್ತಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಾ. ೨೧ ರಿಂದ ಕಟ್ಟು ಬೀಳುವ ಮೂಲಕ ಆರಂಭಗೊAಡ ಉತ್ಸವವು ವಿವಿಧ ಧಾರ್ಮಿಕ ಕಾರ್ಯದೊಂದಿಗೆ ಮಾ. ೨೭ ರಂದು ಕೋಲ ನಡೆಯಿತು. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು. ದೇವಾಲಯ ಸಮಿತಿ ಅಧ್ಯಕ್ಷ ನೆರಪಂಡ ಚಿತ್ರಾ ಬೆಳ್ಯಪ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.