ಕುಶಾಲನಗರ, ಏ. ೪: ದಾಖಲೆ ರಹಿತ ಹಣ ಸಾಗಾಟ ಮಾಡುತ್ತಿದ್ದ ನಾಲ್ಕು ಪ್ರಕರಣಗಳನ್ನು ಪತ್ತೆ ಹಚ್ಚಿ ಕುಶಾಲನಗರ ಗಡಿಭಾಗದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ಒಟ್ಟು ಐದು ಲಕ್ಷದ ಇಪ್ಪತ್ತೆöÊದು ಸಾವಿರ ನಗದು ಹಣವನ್ನು ವಶಕ್ಕೆ ತೆಗೆದುಕೊಂಡು ಕ್ರಮಕೈಗೊಂಡಿದ್ದಾರೆ.
ಮೈಸೂರು ಕಡೆಯಿಂದ ಕೊಡಗು ಜಿಲ್ಲೆಗೆ ಹಾಲಿನ ಲಾರಿಯಲ್ಲಿ ೨.೨೬ ಲಕ್ಷ, ಸೇರಿದಂತೆ ಬೈಕ್ ಕಾರುಗಳಲ್ಲಿ ಹಣ ಸಾಗಿಸುತ್ತಿದ್ದ ಸಂದರ್ಭ ಯಾವುದೇ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಪತ್ತೆ ಹಚ್ಚಿ ಹಣವನ್ನು ವಶಕ್ಕೆ ಪಡೆದು ಚುನಾವಣಾ ಅಧಿಕಾರಿಗಳ ಸುಪರ್ದಿಗೆ ನೀಡಿದ್ದಾರೆ.
ನಂತರ ದಾಖಲೆಗಳನ್ನು ಒದಗಿಸಿದ ಹಿನ್ನೆಲೆ ಹಣವನ್ನು ಸಂಬAಧಿಸಿದವರಿಗೆ ಹಿಂತಿರುಗಿಸ ಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಸಂಸ್ಥೆ, ವರ್ತಕರ ವ್ಯಾಪಾರ ವಹಿವಾಟಿನ ಹಣ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂದರ್ಭ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತರಾಜ್ ಉದ್ಯಮಿಗಳ ದೂರಿನ ಮೇರೆಗೆ ಸ್ಥಳಕ್ಕೆ ಬಂದು ಅಧಿಕಾರಿಗಳ ಜೊತೆ ಅಸಮಾಧಾನ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಕುಶಾಲನಗರ ಕೊಪ್ಪ ಬೈಲುಕೊಪ್ಪ ವ್ಯಾಪ್ತಿಯಲ್ಲಿ ಸ್ಥಳೀಯ ಉದ್ಯಮಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದು ಈ ವೇಳೆ ಹಣ ವಶಪಡಿಸಿಕೊಂಡು ಉದ್ಯಮಿಗಳಿಗೆ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾ ಸೆಕ್ಟರ್ ಮ್ಯಾಜಿಸ್ಟೆçÃಟ್ ನಾರಾಯಣ ರೆಡ್ಡಿ ಅವರು ವಾಹನ ತಪಾಸಣಾ ಕೇಂದ್ರದಲ್ಲಿ ನಿಯಮಾನುಸಾರ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಅವರಿಗೆ ಮನವರಿಕೆ ಮಾಡಿದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಸೋಮವಾರ ರಾತ್ರಿ ಕುಶಾಲನಗರ ವಾಹನ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪ್ರತಿ ವಾಹನವನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭ ವಾಹನ ಸಂಚಾರ ಒತ್ತಡದ ಕಾರಣ ಕುಶಾಲನಗರ ಮತ್ತು ಬೈಲುಕೊಪ್ಪ ನಡುವೆ ಕಿಲೋಮೀಟರ್ಗಟ್ಟಲೆ ವಾಹನಗಳ ಸಾಲು ಕಂಡು ಬಂತು. ಮೈಸೂರು ಜಿಲ್ಲೆ ಗಡಿಭಾಗ ಕೊಪ್ಪದಲ್ಲಿ ಕೂಡ ವಾಹನ ತಪಾಸಣಾ ಕೇಂದ್ರ ಕಾರ್ಯಾಚರಣೆ ಮಾಡುತ್ತಿದ್ದು ಇದರಿಂದ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಪೂರ್ಣ ಅಡ್ಡಿ ಉಂಟಾಗುತ್ತಿದೆ.
ಕುಶಾಲನಗರದಲ್ಲಿ ಮಂಗಳವಾರ ಸಂತೆ ಆದ ಕಾರಣ ವಾಹನ ಸಂಚಾರದಲ್ಲಿ ಭಾರೀ ಹೆಚ್ಚಳ ಉಂಟಾಗಿತ್ತು. ರೋಗಿಗಳನ್ನು ಸಾಗಿಸುವ ಸಂದರ್ಭ ಆ್ಯಂಬ್ಯುಲೆನ್ಸ್ ವಾಹನಗಳಿಗೂ ಅಡ್ಡಿ ಉಂಟಾದ ದೃಶ್ಯ ಕೂಡ ಗೋಚರಿಸಿತು.
ಪಥಸಂಚಲನ
ಚುನಾವಣೆ ಹಿನ್ನೆಲೆ ನಗರದ ಮುಖ್ಯಬೀದಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿತು. ಶಸ್ತçಸಜ್ಜಿತ ಸಿಬ್ಬಂದಿಗಳು ಕಾಲ್ನಡಿಗೆಯಲ್ಲಿ ತೆರಳಿ ಶಕ್ತಿ ಪ್ರದರ್ಶಿಸಿದರು.