ಕೂಡಿಗೆ, ಏ. ೩: ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ವಿಷಯಗಳ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಕರೆ ನೀಡಿದರು.

ನಂಜರಾಯಪಟ್ಟಣ ಪ್ರೌಢಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಕಾನೂನು ಅರಿವು ಎಂಬ ವಿಷಯ ಕುರಿತು ಮಾತನಾಡಿದ ಅವರು, ಕಾನೂನು ತಿಳುವಳಿಕೆಯಿಂದ ಅಪರಾಧ ಕೃತ್ಯ ತಡೆಗಟ್ಟಬಹುದು. ಜೊತೆಗೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ. ಕೂಡಿಗೆ ಪದವಿಪೂರ್ವ ಕಾಲೇಜು ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಎನ್.ಎಸ್.ಎಸ್. ಶಿಬಿರವು ಭವಿಷ್ಯದಲ್ಲಿ ವಿದ್ಯಾರ್ಥಿ ಗಳು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಅಲ್ಲದೆ ಬದುಕಿನ ಎಲ್ಲಾ ಮೌಲ್ಯಗಳು ಸೇವೆಯ ದೃಷ್ಟಿಕೋನದ ಮೂಲಕ ತಿಳಿವಳಿಕೆಯ ಪ್ರಗತಿಗೆ ಪೂರಕವಾಗು ತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಧೀಕ್ಷಕ ಎಸ್.ಬಿ. ಮಹೇಶ್ ವಹಿಸಿದ್ದರು. ವೇದಿಕೆ ಯಲ್ಲಿ ನಂಜರಾಯಪಟ್ಟಣ ವಿದ್ಯಾಸಂಘದ ಪಿ.ಬಿ. ಅಶೋಕ್ ನಂಜರಾಯಪಟ್ಟಣ ಉಪ ವಲಯ ಅರಣ್ಯ ಅಧಿಕಾರಿ ಸುಬ್ರಾಯ, ಕಾಲೇಜು ಅಧ್ಯಕ್ಷ ಎನ್ ,ಎನ್, ಶಂಭುಲಿAಗಪ್ಪ, ಪದವಿ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತ, ಶಿಬಿರಾಧಿಕಾರಿ ಮಂಜೇಶ್, ದಿನೇಶ್ ಕುಮಾರ್, ಬಿಂದು, ಮುಮ್ತಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.