ಮಡಿಕೇರಿ, ಏ. ೨: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ ರೋಚಕ ಘಟ್ಟದತ್ತ ತಲುಪುತ್ತಿದೆ. ತಾ. ೩ ರಂದು (ಇಂದು) ಮಾತ್ರ ಮೂರು ಮೈದಾನಗಳಲ್ಲಿ ಪಂದ್ಯಾಟ ನಡೆಯಲಿದ್ದು, ತಾ. ೪ ರಿಂದ ಜನರಲ್ ತಿಮ್ಮಯ್ಯ ಮುಖ್ಯ ಮೈದಾನವೊಂದರಲ್ಲೇ ಉಳಿದ ಪಂದ್ಯಗಳು ಜರುಗಲಿವೆ. ಪ್ರಸ್ತುತ ೩೨ ಕುಟುಂಬಗಳು ಮಾತ್ರ ಬಾಕಿ ಉಳಿದಿದ್ದು, ಇತರ ಕುಟುಂಬಗಳು ಪಂದ್ಯಾವಳಿಯಿAದ ನಿರ್ಗಮಿಸಿವೆ.

ಸೋಮವಾರದ ಪಂದ್ಯದ ಬಳಿಕ ಪ್ರಿಕ್ವಾರ್ಟರ್ ಪ್ರವೇಶಿಸುವ ತಂಡಗಳು ಯಾವೆಂಬದು ನಿರ್ಧಾರವಾಗಲಿದೆ. ರೋಚಕ ಹಂತದತ್ತ ಪಂದ್ಯಾವಳಿ ಸಾಗುತ್ತಿರುವಂತೆ ಮೈದಾನದಲ್ಲಿ ಹಾಕಿ ಪ್ರಿಯರ ಸಂಖ್ಯೆಯೂ ಹೆಚ್ಚಾಗುತ್ತಿವೆ. ಒಂದೇ ಮೈದಾನಕ್ಕೆ ಪಂದ್ಯಗಳು ನಿಗದಿಯಾದ ನಂತರ ಪ್ರೇಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ತಾ. ೯ ರಂದು ಫೈನಲ್ ಪಂದ್ಯಾವಳಿ ಜರುಗಲಿದ್ದು, ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲದ ಚರ್ಚೆಗಳು ನಡೆಯುತ್ತಿವೆ.