ಕಾರ್ಯಪ್ಪ ಟ್ರೋಫಿ ವಿತರಣೆ

ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ನೀಡಲಾಗುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಪಿಸಿ ವಿ. ಪ್ರಕಾಶ್ ಪಡೆದುಕೊಂಡರು. ಇತ್ತೀಚೆಗೆ ಕುಶಾಲನಗರದ ಅಮನ್‌ವನಾ ರೆಸಾರ್ಟ್ನಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಪ್ರಕಾಶ್ ಅವರು ಕಾರ್ಯಪ್ಪ ಟ್ರೋಫಿಗೆ ಭಾಜನರಾದರು.ಅತ್ಯುತ್ತಮ ಪೊಲೀಸ್ ಪ್ರಶಸ್ತಿಯನ್ನು ಡಿಎಸ್‌ಬಿ ಘಟಕದ ಸವಿತಾ ಪಡೆದುಕೊಂಡರು. ಟಿಪ್ಪು ಜಯಂತಿ ಸೇರಿದಂತೆ ಹಲವಾರು ಪ್ರಕರಣಗಳ ಸಂದರ್ಭ ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ಪ್ರಶಸ್ತಿ ನೀಡಲಾಯಿತು.