ನಾಪೋಕ್ಲು, ಏ. ೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿನಾಲ್ಕನೆಯ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಅಂಜಪರವAಡ ತಂಡವು ಕೊಲ್ಲೀರ ತಂಡದ ವಿರುದ್ಧ ಸೋಲನುಭವಿಸುವದರ ಮೂಲಕ ಅಪ್ಪಚೆಟ್ಟೋಳಂಡ ಕಪ್‌ನಿಂದ ನಿರ್ಗಮಿಸಿದೆ.

ಮಾಜಿ ಚಾಂಪಿಯನ್ ಚೇಂದAಡ ತಂಡದ ನಿರ್ಗಮನದ ಬೆನ್ನಲ್ಲೇ ೨ ಬಾರಿಯ ಚಾಂಪಿಯನ್ ಅಂಜಪರವAಡ ತಂಡವೂ ಪಂದ್ಯಾಟದಿAದ ಹೊರಬಿದ್ದಿದೆ. ೨೦೦೮ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್ ಹಾಗೂ ೨೦೧೩ರಲ್ಲಿ ಬಾಳುಗೋಡುವಿನಲ್ಲಿ ನಡೆದ ಮಾದಂಡ ಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಈ ತಂಡವು ೨೦೧೮ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟಿರ ಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಇದೀಗ, ಕೊಲ್ಲೀರ ತಂಡದ ವಿರುದ್ದ ಟೈಬ್ರೇಕರ್‌ನ ೩-೨ ಗೋಲುಗಳ ಅಂತರದಿAದ ಪರಾಭವಗೊಂಡು ಈ ಬಾರಿಯ ಚಾಂಪಿಯನ್ ಕನಸು ಭಗ್ನಗೊಂಡಿದೆ.

ತಾ. ೧ರಂದು ನಡೆದ ಪಂದ್ಯಾಟದಲ್ಲಿ ಚೊಟ್ಟಯಂಡಮಾಡ, ಕೊಲ್ಲಿರ, ಕಂಬೀರAಡ, ಕುಪ್ಪಂಡ, ಕಲ್ಯಾಟಂಡ, ಕರಿನೆರವಂಡ, ಕೂತಂಡ, ಬೊವ್ವೇರಿಯಂಡ, ಪೆಮ್ಮಂಡ, ತೀತಿಮಾಡ, ಮಾಚಿಮಂಡ, ಪುಟ್ಟಿಚಂಡ, ನಾಳಿಯಂಡ, ಪಳಂಗAಡ, ಬೊಳ್ಳಂಡ, ಮುಕ್ಕಾಟಿರ(ಕಡಗದಾಳು), ಮುಕ್ಕಾಟಿರ(ಹರಿಹರ) ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿತು.

ಮೈದಾನ ೧ರ ಪಾಲೆಯಡ ಮತ್ತು ಚೊಟ್ಟೆಯಂಡಮಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೊಟ್ಟೆಯಂಡಮಾಡ ತಂಡವು ಪಾಲೆಯಡ ತಂಡವನ್ನು ೪-೦ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಕಂಬೀರAಡ ತಂಡವು ಬೊಳಕಾರಂಡ ತಂಡವನ್ನು ೪-೦ ಗೋಲಿನ ಅಂತರದಿAದ, ಕುಪ್ಪಂಡ ತಂಡವು ಚೆರುಮಂದAಡ ತಂಡವನ್ನು ೫-೨ ಗೋಲಿನ ಅಂತರದಿAದ, ಕಲ್ಯಾಟಂಡ ತಂಡವು ಕೊಣಿಯಂಡ ತಂಡವನ್ನು ೪-೩ ಗೋಲಿನ ಅಂತರದಿAದ, ಕರಿನೆರವಂಡ ಮತ್ತು ಕೊಕ್ಕಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಕರಿನೆರವಂಡ ತಂಡವು ಕೊಕ್ಕಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.

ಮೈದಾನ ೨ರಲ್ಲಿ ನಡೆದ ಕೂತಂಡ ಮತ್ತು ಮತ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡವು ಮತ್ರಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಬೊವ್ವೇರಿಯಂಡ ತಂಡವು ಕುಂಡ್ಯೋಳAಡ ತಂಡವನ್ನು ೨-೦ ಗೋಲಿನ ಅಂತರದಿAದ, ಮಾಚಿಮಂಡ ತಂಡವು ಮಣವಟ್ಟಿರ ತಂಡವನ್ನು ಟೈಬ್ರೇಕರ್‌ನ ೩-೨ ಗೋಲುಗಳ ಅಂತರದಿAದ, ಪುಟ್ಟಿಚಂಡ ತಂಡವು ಬೊಟ್ಟೋಳಂಡ ತಂಡವನ್ನು ೧-೦ ಗೋಲುಗಳ ಅಂತರದಿAದ, ನಾಳಿಯಂಡ ತಂಡವು ಚಪ್ಪಂಡ ತಂಡವನ್ನು ೨-೦ ಗೋಲಿನ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಮೈದಾನ ೩ರಲ್ಲಿ ನಡೆದ ಚೋಕಿರ ಮತ್ತು ಪಳಂಗAಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗAಡ ತಂಡವು ಚೋಕಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬೊಳ್ಳಂಡ ತಂಡವು ಅಜ್ಜಮಾಡ ತಂಡವನ್ನು ೩-೧ ಗೋಲುಗಳ ಅಂತರದಿAದ, ಮುಕ್ಕಾಟಿರ (ಕಡಗದಾಳು) ತಂಡವು ಮಂಡೇಡ ತಂಡವನ್ನು ೫-೧ ಗೋಲಿನ ಅಂತರದಿAದ, ಮುಕ್ಕಾಟಿರ (ಹರಿಹರ) ತಂಡವು ನಾಪಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

-ಪಿ.ವಿ.ಪ್ರಭಾಕರ್