ಸಿದ್ದಾಪುರ, ಏ. ೧: ಗುಹ್ಯ ಗ್ರಾಮದ ಜಮೀಲಾ ಅವರ ಅಂಗಳದಲ್ಲಿದ್ದ ಹಾವನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ಹಿಡಿದು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾದರು. ಸೆರೆ ಹಿಡಿದ ೫ ಅಡಿ ಉದ್ದದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು. ಹಾವು ಕಂಡಲ್ಲಿ ಸುರೇಶ್ ಪೂಜಾರಿ ಅವರ ಮೊಬೈಲ್ ಸಂಖ್ಯೆ ೮೨೭೭೧೩೧೮೬೩ಗೆ ಕರೆ ಮಾಡಬಹುದಾಗಿದೆ.