ಸೋಮವಾರಪೇಟೆ, ಏ. ೨: ಜಿಲ್ಲೆಯ ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಕ್ಷೇತ್ರಪಾಲ ದೇವರ ಉತ್ಸವವು ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನಡೆಯಿತು.

ಏಪ್ರಿಲ್ ೧ರ ಬೆಳಿಗ್ಗೆ ೪ ಗಂಟೆಗೆ ದೇವರ ಪ್ರದಕ್ಷಿಣೆ, ಆಂಗೋಲ-ಪೊAಗೋಲ, ಸಂಜೆ ೫ ಗಂಟೆಗೆ ಕ್ಷೇತ್ರಪಾಲ ವಿಷ್ಣುಮೂರ್ತಿ ದೇವರ ೫ ಕೋಲಗಳು ನಡೆದವು. ಊರಿನ ತಕ್ಕ ಮುಖ್ಯಸ್ಥರು, ದೇವಸ್ಥಾನ ಆಡಳಿತ ಮಂಡಳಿಯವರು, ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.