ವೀರಾಜಪೇಟೆ, ಮಾ. ೩೧: ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆ ತರಬೇತಿ ಯೋಜನೆಯಡಿ ಚರ್ಮ ಕೈಗಾರಿಕೆಗೆ ಸಂಬAಧಿಸಿದAತೆ ವೀರಾಜಪೇಟೆಯ ೩೦ ಫಲಾನುಭವಿಗಳಿಗೆ ತಾ. ೨೪ರ ಶುಕ್ರವಾರ ಸಂಸದ ಪ್ರತಾಪ್ ಸಿಂಹ ಅವರು ಪ್ರಮಾಣಪತ್ರ, ರೂ. ೬,೦೦೦ ವಿದ್ಯಾರ್ಥಿ ವೇತನ ಮತ್ತು ಹೊಲಿಗೆ ಯಂತ್ರವನ್ನು ವಿತರಿಸಿದರು.

ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅಧಿಕಾರಿಗಳು, ವೀರಾಜಪೇಟೆ ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಕೂತಂಡ ಸಚಿನ್ ಕುಟ್ಟಯ್ಯ, ತಸ್ಲಿಂ ಅಕ್ತರ್, ಸುನಿತ ಸೇರಿದಂತೆ ಇತರರು ಹಾಜರಿದ್ದರು.