ಮಡಿಕೇರಿ, ಏ. ೧: ವಿಧಾನಸಭಾ ಚುನಾವಣೆ ಹಿನ್ನೆಲೆ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೊಡಗಿನ ಶಾಸದ್ವಯರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪೂರ್ವಾ ನುಮತಿ ಪಡೆಯದೆ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶುಭಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊAಡಿದ್ದರು. ಈ ಹಿನ್ನೆಲೆ ವೀರಾಜಪೇಟೆ ಕ್ಷೇತ್ರದ ಚುನಾವಣಾಧಿಕಾರಿ ಶಭಾನ ಶೇಕ್ ನೋಟೀಸ್ ಜಾರಿ ಮಾಡಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫೇಸ್‌ಬುಕ್ ನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರಿಗೆ ಜನ್ಮದಿನದ ಶುಭಕೋರಿ ಪೋಸ್ಟ್ ಹಾಕಿದ್ದಾರೆ. ಈ ಕಾರಣಕ್ಕಾಗಿ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ. ಯತೀಶ್ ಉಲ್ಲಾಳ ನೋಟೀಸ್ ಜಾರಿಗೊಳಿಸಿದ್ದಾರೆ.

ಇದರೊಂದಿಗೆ ನಾಲ್ಕೇರಿ ಗ್ರಾಮದ ಬಿಜೆಪಿ ಕಾರ್ಯಕರ್ತ ಚೆರಿಯಪಂಡ ಸಚಿನ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಜ. ಕೆ.ಎಸ್. ತಿಮ್ಮಯ್ಯ ಜಯಂತಿ ಹಿನ್ನೆಲೆ ಹಂಚಿಕೊAಡಿದ್ದ ಪೋಸ್ಟ್ನಲ್ಲಿ ರಾಜಕೀಯ ಪ್ರೇರಿತ ಅಂಶಗಳಿದ್ದು, ಅವರಿಗೂ ನೋಟೀಸ್ ಜಾರಿ ಮಾಡಿದ್ದಾರೆ.

ಎಲ್ಲರೂ ೨೪ ಗಂಟೆಯೊಳಗೆ ಕಾನೂನು ಕ್ರಮ ಏಕೆ ಜರುಗಿಸಬಾರದು ಎಂದು ಸೂಕ್ತ ಕಾರಣ ತಿಳಿಸುವಂತೆ. ಸಮಜಾಯಿಷಿಕೆ ನೀಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಎಚ್ಚರಿಸಿ ನೋಟೀಸ್ ರವಾನಿಸಿದ್ದಾರೆ.