ಕುಶಾಲನಗರ, ಏ. ೧: ಚಂದನಶ್ರೀ ಪ್ರಕಾಶನದಲ್ಲಿ ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್. ನಾರಾಯಣ ಅವರು ರಚಿಸಿರುವ ಮಕ್ಕಳ ಸಾಹಿತ್ಯ ಪುಸ್ತಕದ ಬಿಡುಗಡೆ ತಾ. ೨ ರಂದು (ಇಂದು) ಕುಶಾಲನಗರದಲ್ಲಿ ನಡೆಯಲಿದೆ.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ೧೨.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಪುಸ್ತಕ ಬಿಡುಗಡೆಗೊಳಿ ಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.