ಶ್ರೀಮಂಗಲ, ಮಾ. ೩೧: ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲಾಡಳಿತ ಇ-ಪ್ರಸಾದ ಎಂಬ ಹೆಸರಿನಲ್ಲಿ ತಲಕಾವೇರಿಯ ತೀರ್ಥ ಪ್ರಸಾದವನ್ನು ರೂ. ೩೦೦ ಪಾವತಿಸಿದರೆ ಅಂಚೆ ಮುಖಾಂತರ ಮನೆ ಮನೆಗೆ ತಲುಪಿಸು ವಂತ ಯೋಜನೆಯನ್ನು ಆರಂಭಿಸಿದ್ದು, ಯೋಜನೆಯನ್ನು ಕೂಡಲೇ ಸ್ಥಗಿತ ಗೊಳಿಸಬೇಕು ಎಂದು ತಿಂಗಕೊರ್ ಮೊಟ್ಟ್ ತಲಕಾವೇರಿಕ್ (ಕಾವೇರಿ ಭಕ್ತಾದಿಗಳ ಸಂಘ)ಕೂಟ ಜಿಲ್ಲಾಡಳಿತ ವನ್ನು ಒತ್ತಾಯಿಸಿದೆ. ಕಾವೇರಿ ಮಾತೆಯ ಸ್ಥಳೀಯ ಭಕ್ತಾದಿಗಳ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯ ವಾಗಿ ದಿಢೀರ್ ಈ ಯೋಜನೆಯನ್ನು ಶುರುಮಾಡಿರುವುದು ತಪ್ಪು ಎಂದು ಹೇಳಿರುವ ಕೂಟದವರು ಹಾಗೆಯೇ ಜಿಲ್ಲಾಡಳಿತಕ್ಕೆ ಭಾಗ ಮಂಡಲ, ತಲಕಾವೇರಿ ಕ್ಷೇತ್ರದಲ್ಲಿ ಏನಾದರು ಒಳ್ಳೆಯ ವ್ಯವಸ್ಥೆ ಮಾಡುವು ದಾದರೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ವಸ್ತç ಸಂಹಿತೆಯ ಬಗ್ಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಿ ಎಂದಿದ್ದಾರೆ. ಕಾವೇರಿ ತೀರ್ಥ ಕುಂಡಿಕೆಗೆ ಕುಂಡಿಕೆಯ ಹಿಂಬದಿಯ ಮುಖಾಂತರ ಹೋಗುವ ಬದಲು ಹಿಂದಿನ ಕಾಲದಿಂದಲು ನಡೆದು ಬಂದ ರೀತಿಯಲ್ಲಿ ತೀರ್ಥ ಕುಂಡಿಕೆಯ ಮುಂದಿನ ಭಾಗದಲ್ಲಿರುವ ಬ್ರಹ್ಮ ಕುಂಡಿಕೆಯ ಒಂದು ಬದಿಯಲ್ಲಿ ಹೋಗುವಂತೆ ವ್ಯವಸ್ಥೆ ಮಾಡಲಿ, ದೇವಸ್ಥಾನದ ಸುತ್ತಮುತ್ತಲಿನಲ್ಲಿ ಮಾಂಸ, ಮೀನಿನ ಅಂಗಡಿ ಇದ್ದು ಅದನ್ನು ತೆರವುಗೊಳಿಸುವ ಕೆಲಸ ಮಾಡಲಿ, ಇದರ ಬಗ್ಗೆ ಎರಡು ಮೂರು ಸಲ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟರೂ ಇದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಕೂಟದ ಪ್ರಮುಖರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ತಲಕಾವೇರಿಗೆ ಕೂಟದವರಾದ ತಲಕಾವೇರಿ, ಭಾಗ ಮಂಡಲ ಮೂಲ ತಕ್ಕ ಕುಟುಂಬದ ಮಂಡೀರ ರೋಷನ್, ಮಣವಟ್ಟಿರ ಅರುಣ್, ಪ್ರವೀಣ್, ಭಕ್ತಾದಿಗಳಾದ ಮಲ್ಲಪನೆರ ವಿನು ಚಿಣ್ಣಪ್ಪ, ಅಣ್ಣೀರ ಹರೀಶ್ ಮಾದಪ್ಪ, ಬಲ್ಲಣಮಾಡ ಲಿತೀನ್, ಚೊಟ್ಟೇಪಂಡ ಸ್ವಪ್ನ, ಶರತ್, ತೆನ್ನಿರ ಟೀನಾ, ಗಿರೀಶ್ ಚಂಗಪ್ಪ, ನೂರೇರ ಜೀವನ್ ಅಯ್ಯಪ್ಪ, ನಾಮೇರ ಯಜ್ಞನವರು ಈ ಬಗ್ಗೆ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.